ತಂದೆಯ ಚಿತೆಗೆ ಅಗ್ನಿ ಸ್ಪರ್ಶ: ಸಂಪ್ರದಾಯಕ್ಕೆ ಕಟ್ಟುಬೀಳದೆ ಅಂತಿಮ ವಿಧಿವಿಧಾನ ನೆರವೇರಿಸಿದ ಮಗಳು

ಗೃಹಪ್ರವೇಶದ ಬಳಿಕ ಸಾವಿಗೆ ಶರಣಾದ ತಂದೆ

ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆಯ ಅಂತ್ಯಕ್ರಿಯೆಯನ್ನು ಮಗಳೇ ನೆರವೇರಿಸಿದ ಘಟನೆ ಭಟ್ಕಳ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ. ಮಂಜುನಾಥ ನಾಗಪ್ಪ ನಾಯ್ಕ್ (51) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮನೆಯ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿದ್ದರು. ಆದರೆ ಮಂಗಳವಾರ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮನೆಯ ಬಳಿ ಮರವೊಂದಕ್ಕೆ ಲುಂಗಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದೆರು. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆಂಬ್ಯುಲೆನ್ಸ್ ನ ವೆಂಟಿಲೇಟರ್ ಮಶಿನ್ ಹಾಗೂ ಸ್ಟೆಪ್ನಿ ಟಯರ್‌ಗಳನ್ನ ಕದ್ದ ಕಳ್ಳ ಅರೆಸ್ಟ್

ಆದರೆ ಮೃತ ವ್ಯಕ್ತಿಗೆ ಮೂರು ಹೆಣ್ಣುಮಕ್ಕಳು ಮಾತ್ರ ಇದ್ದು, ಗಂಡು ಮಕ್ಕಳು ಇರಲಿಲ್ಲ. ಅಂತ್ಯಸoಸ್ಕಾರವನ್ನು ಗಂಡು ಮಕ್ಕಳು ಇಲ್ಲವೇ ರಕ್ತ ಸಂಬoಧಿಗಳು ನೆರವೇರಿಸಬೇಕಿತ್ತಾದರೂ ಎಲ್ಲ ಸಂಪ್ರದಾಯಗಳನ್ನು ಬದಿಗಿಟ್ಟು ಮೃತರ ಹಿರಿಯ ಮಗಳಾದ ಶ್ವೇತಾ ನಾಗಪ್ಪ ನಾಯ್ಕ ಅವರೇ ಅಂತ್ಯಕ್ರಿಯೆ ಕಾರ್ಯ ನಡೆಸಿದರು. ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಸಂಪ್ರದಾಯಕ್ಕೆ ಕಟ್ಟುಬೀಳದೆ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version