ಜನರಿಗೆ ಮುಲಭೂತ ಸೌಕರ್ಯ ಸಿಗಬೇಕು: ಆರ್.ವಿ.ದೇಶಪಾಂಡೆ

ಜೋಯ್ಡಾ: ಜನರಿಗೆ ಮುಲಭೂತ ಸೌಕರ್ಯ ಸಿಗಬೇಕು. ಎಲ್ಲ ಸಮಾಜದ ಅಭಿವೃದ್ಧಿ ಸಲುವಾಗಿ ನಿಮ್ಮ ಸಹಕಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಭಿವೃದ್ದಿ ಕೆಲಸ ಮಾಡುವಾಗ ನಾನು ಜಾತಿ,ವ್ಯಕ್ತಿ ಯಾವದನ್ನೂ ನೋಡುವುದಿಲ್ಲ. ಜನರಲ್ಲಿ ಜಾಗ್ರತಿ ಬರಬೇಕು. ಸರಿಯಾಗಿ ಕೆಲಸ ಆಗಿಲ್ಲ ಎಂದರೆ ನನ್ನ ಗಮನಕ್ಕೆ ತನ್ನಿ ಎಂದು ಹಳಿಯಾಳ ಜೋಯಿಡಾ ಶಾಸಕ ಆರ್.ವಿ ದೇಶಪಾಂಡೆ ಹೇಳಿದರು. ಅವರು ತಾಲೂಕಿನ ಜಗಲಬೇಟ ಮತ್ತು ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 3 ಕೋಟಿ ವೆಚ್ಚದ ಕುಡಿಯುವ ನೀರು ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಜಗಲಬೇಟ ಗ್ರಾಮ ಪಂಚಾಯತ ದುರ್ಗಿಯಲ್ಲಿ 60 ಲಕ್ಷದಲ್ಲಿ ರಸ್ತೆ ಕಾಮಗಾರಿ , ಶಾಲಾ ಕಟ್ಟಡ 14 ಲಕ್ಷ, ತಿಂಬೋಲಿಯಲ್ಲಿ 1 ಕೊಟಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಮನಗರದಲ್ಲಿ 2 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಬದಲ್ಲಿ ಜಗಲಬೇಟ ಗ್ರಾ.ಪಂ ಅಧ್ಯಕ್ಷ ಗಿರಿಶ ನಾಯ್ಕ, ಜಿ.ಪಂ ಮಾಜಿ ಸದಸ್ಯ ಸಂಜಯ ಹಣಬರ, ತಾ.ಪಂ ಮಾಜಿ ಉಪಾಧ್ಯಕ್ಷ ವಿಜಯ ಪಂಡಿತ,ಗ್ರಾ.ಪo ಸದಸ್ಯ ಸುಹಾಸ ದೇಸಾಯಿ,ಗುರುನಾಥ ಕಾಮತ ತಹಸಿಲ್ದಾರ ಶೈಲೇಶ ಪರಮಾನಂದ, ಜಿ.ಪಂ ಎಇಇ ಮಹಮದ್ ಇಜಾನ ಸುಭಾನ್ ಮುಂತಾದವರು ಉಪಸ್ಥೀತರಿದ್ದರು.

ವಿಸ್ಮಯ ನ್ಯೂಸ್, ಜೋಯ್ಡಾ

Exit mobile version