ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಾಖಾಮಠದ ಪೂಜ್ಯರಾದ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಯವರ ವರ್ಧಂತಿ (ಜನ್ಮದಿನ) ಆಚರಿಸಲಾಯಿತು. ದಿವ್ಯ ಸಾನಿಧ್ಯ ವಹಿಸಿದ್ದ ಮಿರ್ಜಾನ್ ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಪ್ರಾಂಶುಪಾಲರಾದ ಶ್ರೀಮತಿ ಲೀನಾ ಗೊನೇಹಳ್ಳಿಯವರು ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಯವರ ಬಗ್ಗೆ ಮಾತನಾಡಿದರು. ಹಿರಿಯ ಶಿಕ್ಷಕರಾದ ಶ್ರೀ ಎಂ. ಜಿ. ಹಿರೇಕುಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ನಾದಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕುಮಾರಿ ರಕ್ಷಾ ಮತ್ತು ಸಂಗಡಿಗರು ಭೈರವಾಷ್ಷಕಂ ಪಠಿಸಿದರು. ಕುಮಾರಿ ಪೃಥ್ವಿ ಹಾಗೂ ಸಂಗಡಿಗರು ಕುರಿತು ಭೈರವನ ಕುರಿತು ಗೀತೆಯನ್ನು ಹಾಡಿದರು. ಕುಮಾರಿ ಶುಮೈಲಾ ಮತ್ತು ಸಂಗಡಿಗರು “ಭಾರತದ ಸಂವಿದಾತನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು” ಎಂಬ ಸ್ಕಿಟ್ ಪ್ರಸ್ತುತಪಡಿಸಿದರು.
ಕುಮಾರಿ ತನುಶ್ರೀ ನಾಯ್ಕ ಕಾರ್ಯಕ್ರಮ ನಿರೂಪಿಸಿದಳು. ಶಿಕ್ಷಕ ರಮೇಶ ನಾಯ್ಕ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಯವರ ಜೀವನ ಚರಿತ್ರೆಯ ಬಗ್ಗೆ ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಶಿಕ್ಷಕ ಸಂದೀಪ ನಾಯ್ಕ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು
ವಿಸ್ಮಯ ನ್ಯೂಸ್, ಕುಮಟಾ