ಮಾಹಿಳಾ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಬೈಕ್ ಜಾಥಾ: ಮಹಿಳಾ ಕಾರ್ಯಕರ್ತರಿಂದ ಭಗವದ್ಗೀತಾ ಪಠಣ

ಶಿರಸಿ: ಕರ್ನಾಟಕ ರಾಜ್ಯ ಬಿಜೆಪಿಯ ಆದೇಶದಂತೆ ರಾಜ್ಯದಲ್ಲಿ ನಡೆಯುವ ಮಹಿಳಾ ಮೋರ್ಚ ಸಮಾವೇಶದ ಪೂರ್ವ ಭಾವಿಯಾಗಿ ಮಹಿಳಾ ಜನಜಾಗೃತಿಗಾಗಿ ಮಂಗಳವಾರ ಶಿರಸಿ ಮಾಹಿಳಾ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಬೈಕ್ ಜಾಥಾ ನಡೆಸಿದರು. ಜಿಲ್ಲಾಧ್ಯಕ್ಷ ವೇಂಕಟೇಶ್ ನಾಯ್ಕ ಮಾತನಾಡಿ ಭಾರತೀಯ ಜನತಾ ಪಾರ್ಟಿ ಯಲ್ಲಿ ಮೊರ್ಚಾಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲಿ ಮಹಿಳಾ ಮೊರ್ಚಾ ಬಹು ಮಹತ್ವದ್ದಾಗಿದೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಮಹಿಳಾ ಮೊರ್ಚಾ ದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ಕಾರ್ಯಕ್ರಮ ಗಳು ನಡೆಯಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ನಾಯ್ಕ ಹತ್ತು ಹಲವು ಜನಪರ ಕಾರ್ಯಕ್ರಮಗಳು ಮಹಿಳಾ ಮೊರ್ಚಾ ದಿಂದ ನಡೆಸುತ್ತಿದ್ದೆವೆ‌. ರಾಜ್ಯ ಘಟಕದ ಆದೇಶದಂತೆ ನಾವು ಬೈಕ್ ಜಾಥಾ ವನ್ನು ನಡೆಸಿದ್ದೆವೆ ಎಂದರು. ನಗರದ ಪಂಡಿತ ದೀನ ದಯಾಳ್ ಭವನದಿಂದ ಪ್ರಾರಂಭವಾದ ಬೈಕ್ ಜಾಥಾ ಅಶ್ವಿನಿ ಸರ್ಕಲ್,ದೇವಿಕೆರೆ,ನಟರಾಜ ರಸ್ತೆ , ಅಂಚೆ ವೃತ್ತ,ಹುಬ್ಬಳ್ಳಿ ರಸ್ತೆ, ಮಾರಿಕಾಂಬಾ ದೇವಸ್ಥಾನ,ಶಿವಾಜಿ ಸರ್ಕಲ್,ಸಿ ಪಿ ಬಝಾರ , ಬಸ್ತಿಗಲ್ಲಿ ಮುಖಾಂತರ ದೇವಿಕೆರ ಬಳಿ ವಂದೇ ಮಾತರಂ ಪ್ರಾರ್ಥನೆ  ಹಾಡಿ ಜಾಥಾವನ್ನು ಅಂತ್ಯ ಗೊಳಿಸಿದರು.ಜಾಥಾದಲ್ಲಿ ನೂರಾರು ಮಹಿಳಾ ಮೊರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.

ಜಾಥಾಕ್ಕೂ ಮೊದಲು ಪಂಡಿತ್ ದೀನದಯಾಳ್ ಭವನದಲ್ಲಿ ಗ್ರಾಮೀಣ ಮಹಿಳಾ ಮೊರ್ಚಾ ದ ಕಾರ್ಯಕರ್ತರು ಭಗವದ್ಗೀತಾ ಪಠಣ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೇಂಕಟೇಶ್ ನಾಯ್ಕ, ಜಿಲ್ಲಾ ಪ್ರಧಾನಿ ಕಾರ್ಯದರ್ಶಿ ಗುರುಪ್ರಸಾದ್ ಹರ್ತೆಬೈಲ್ , ಉಷಾ ಹೆಗಡೆ,ಚಂದ್ರು ಎಸಳೆ , ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಶೋಭಾ ನಾಯ್ಕ, ನಗರ ಮಹಿಳಾ ಮೊರ್ಚಾ ಅಧ್ಯಕ್ಷೆ ದೀಪಾ ಮಹಾಲಿಂಗಣ್ಣನವರ್ , ಶಿಲ್ಪ ನಾಯ್ಕ ನಗರ ಪ್ರಾಧಿಕಾರದ ಅಧ್ಯಕ್ಷ ನಂದನ್ ಸಾಗರ್ , ರಾಜ್ಯ ಘಟಕದ ಅಧ್ಯಕ್ಷೆ ರೇಖಾ ಹೆಗಡೆ ,ಅನುರಾಧ ಭಟ್ ಸೇರಿ ಹಲವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version