ನಡುರಸ್ತೆಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯಸರ ಕದ್ದಿದ್ದ ಆರೋಪಿ ಅಂದರ್ : ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕಾರವಾರ: ಮಾಂಗಲ್ಯ ಸರ ಕದ್ದು ಪರಾರಿಯಾದ ಕಳ್ಳನನ್ನು 24 ಗಂಟೆಯ ಒಳಗೆ ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಹಾಡುಹಗಲೆ ನಡುರಸ್ತೆಯಲ್ಲೇ ಕುತ್ತಿಗೆಗೆ ಕೈಹಾಕಿ, ಆರೋಪಿ ಮಾಗಂಗಲ್ಯ ಸರ ಕದ್ದು ಪರಾರಿಯಾಗಿದ್ದ. ಹೌದು, ಅವರೆಲ್ಲ ಮದುವೆಗೆ ಬಂದಿದ್ದರು. ಆದರೆ ಮದುವೆ ಮುಗಿಸಿ ವಾಪಸ್ ಆಗುವ ವೇಳೆ ಆಗಿದ್ದೆ ಬೇರೆ.

ಚಪ್ಪಲಿ ತುಂಬುವ ಬಾಕ್ಸ್ ನಲ್ಲಿ ರಸ್ತೆಯ ಪಕ್ಕದಲ್ಲಿ ನವಜಾತ ಶಿಶು ಪತ್ತೆ : ಹೆತ್ತತಾಯಿಗೆ ಬೇಡವಾದ ಮಗು

ಹೌದು, ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನ ಅಪರಿಚಿತ ವ್ಯಕ್ತಿ ಎಗರಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಚಂದಾವರ ಹನುಮಂತ ದೇವಸ್ಥಾನದ ಬಳಿ ನಡೆದಿತ್ತು. ಮಹಿಳೆಯೊಬ್ಬಳು ಮದುವೆ ಮುಗಿಸಿ ವಾಪಸ್ಸಾಗಲು ಟೆಂಪೋಗೆ ಕಾಯುತ್ತಿದ್ದ ವೇಳೆ ಏಕಾಏಕಿ ಅಪರಿಚಿತ ನಡೆದು ಬಂದು ಏಕಾಏಕಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದ. ಮಾಂಗಲ್ಯ ಮಾತ್ರವಲ್ಲದೆ ಚೈನ್ ಗೂ ಕೈಹಾಕಿದ್ದು, ಆದರೆ ಚೈನ್ ತುಂಡಾಗಿ ನೆಲಕ್ಕೆ ಬಿದ್ದಿದ್ದರಿಂದ ಅದನ್ನು ಎತ್ತಿಕೊಳ್ಳಲು ಹೆದರಿ ಕಳ್ಳ ಸ್ಥಳದಿಂದ ಪರಾರಿಯಾಗಿದ್ದ.

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಮಹಿಳೆ ಕಂಗಾಲಾಗಿದ್ದಾರೆ. ಹೊನ್ನಾವರದ ಹೊದ್ಕೆ ಶಿರೂರಿನ ವೀಣಾ ದೇಶಭಂಡಾರಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು , ಇದೀಗ 24 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯ ಕೊರಳಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ಕದ್ದು ಪರಾರಿಯಾದ ಆರೋಪಿ ಹೂವಿನಹಿತ್ಲದ ಗಣಪತಿ ನಾಗಪ್ಪ ಗೌಡ ಎಂದು ತಿಳಿದು ಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version