ಕಿಟಕಿ ಒಡೆದು ತಡರಾತ್ರಿ ಅಂಗಡಿಗೆ ನುಗ್ಗಿ ಕಳ್ಳತನ :ಕಳ್ಳನ ಚಹರೆ ಸಿಸಿಟಿವಿಯಲ್ಲಿ ಸೆರೆ

ಹೊನ್ನಾವರ: ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸನಲ್ಲಿರುವ ಅಂಗಡಿವೊoದರಲ್ಲಿ ತಡರಾತ್ರಿ ಕಳ್ಳತನವಾಗಿದೆ. ಅಂಗಡಿಗೆ ಬಂದ ಆಗುಂತಕ,ಅoಗಡಿಯ ಹಿಂದಿನ ಗೊಡೆಗೆ ಅಳವಡಿಸಿದ ಕಿಟಕಿಯ ಕಟ್ಟಿಗೆ ಗೂಟವನ್ನು, ಯಾವುದೋ ಗಟ್ಟಿಯಾದ ವಸ್ತುವಿನಿಂದ ಒಡೆದು ಒಳಗೆ ಬಂದು ತನ್ನ ಅಟ್ಟಹಾಸ ಮೆರೆದಿದ್ದಾನೆ. ಅಂಗಡಿಯಲ್ಲಿದ್ದ 3,700 ನಗದು ಕಳ್ಳತನವಾಗಿದೆ. ಈ ಹಿಂದೆ ಹಲವಾರು ಕಳ್ಳತನದಲ್ಲಿ ಭಾಗಿಯಾದ ಕಳ್ಳನಿರಬಹುದೆಂದು ಅಂದಾಜಿಸಲಾಗಿದೆ.

ಮೂರುತಿಂಗಳ ಶಿಶುವನ್ನು ಬಾಲಮಂದಿರದ ಆವರಣದಲ್ಲಿ ಬಿಟ್ಟುಹೋದ ಪೋಷಕರು: ಸರ್ಕಾರಕ್ಕೆ ಒಪ್ಪಿಸುತ್ತಿದ್ದೇವೆ ಎಂದು ಕ್ಷಮಾಪಣೆ ಪತ್ರ: ಆ ಪತ್ರದಲ್ಲಿ ಏನಿದೆ ನೋಡಿ?

ಈ ಕುರಿತು ಅಂಗಡಿ ಮಾಲೀಕ ಚಂದ್ರಕಾoತ ಅವರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿಸಿ ಕ್ಯಾಮರಾ ದ್ರಶ್ಯಾವಳಿ ಸಂಗ್ರಹಿಸಿ,ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ಪದೇ ಪದೇ ಅಂಗಡಿ ಕಳ್ಳತನವಾದರು ಪೊಲೀಸರು ಕಳ್ಳನ ಪತ್ತೆ ಹಚ್ಚಲು ಸಾಧ್ಯವಾಗದಿರುವ ಬಗ್ಗೆ ಭೇಸರ ವ್ಯಕ್ತಪಡಿಸಿದ್ದು ಶೀಘ್ರವಾಗಿ ಕಳ್ಳನ ಪತ್ತೆಹಚ್ಚಿ ಎಂದು ಅಂಗಡಿ ಮಾಲೀಕ ಚಂದ್ರಕಾoತ ಅವರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version