Join Our

WhatsApp Group
Focus NewsImportant
Trending

ಮಗನೊಂದಿಗೆ ಜಲಪಾತಕ್ಕೆ ಇಳಿದಿದ್ದ ವೇಳೆ ನೀರಿನಲ್ಲಿ ಮುಳುಗಿ ತಂದೆ ಸಾವು

ಯಲ್ಲಾಪುರ: ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಸಾತೊಡ್ಡಿ ಜಲಪಾತದಲ್ಲಿ ನಡೆದಿದೆ. ಹುಬ್ಬಳ್ಳಿಯ ಪೋತುಲ್ ರಾಮನೇಂದ್ರ ರಾವ್ (50) ಮೃತಪಟ್ಟ ದುರ್ದೈವಿ. ಈತ ಪತ್ನಿ ಹಾಗೂ ಇಬ್ಬರು ಮಕ್ಕಳು, ತಂಗಿ ಮತ್ತು ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸ ಬಂದಿದ್ದ. ಆಂಧ್ರಪ್ರದೇಶದ ಮೂಲದವರಾದ ಇವರು ಹುಬ್ಬಳ್ಳಿಯಲ್ಲಿ ರೈಲ್ವೇ ಕಾಮಗಾರಿ ಗುತ್ತಿಗೆದಾರರಾಗಿದ್ದರು ಎನ್ನಲಾಗಿದೆ.

ವಿವಾಹಿತ ಮಹಿಳೆಯ ಖಾಸಗಿ ಫೋಟೋ ಎಡಿಟ್ ಮಾಡಿ ಮಾನಹಾನಿ: ಮೊಬೈಲ್ ಹ್ಯಾಕ್ ಮಾಡಿ ದುಷ್ಕೃತ್ಯ: ಗಂಟೆಗೆ 50 ಸಾವಿರ ಪಡೆಯುತ್ತಿದ್ದ ಹ್ಯಾಕರ್ ಬಂಧನ

ಮಗನೊಂದಿಗೆ ನೀರಿಗಿಳಿದಿದ್ದ ವೇಳೆ ನೀರಿನಲ್ಲಿ ಅಚಾನಕ್ ಆಗಿ ಮುಳುಗಿದ್ದಾರೆ. ಸ್ಥಳೀಯರು, ಉಳಿದ ಪ್ರವಾಸಿಗರು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮೃತದೇಹ ಪತ್ತೆಯಾಗಿದ್ದು, ವಿಷಯ ತಿಳಿದ ಸಂಬoಧಿಕರು, ಸ್ನೇಹಿತರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button