Focus NewsImportant
Trending

8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕ: ವ್ಯಾಪಕ ಮೆಚ್ಚುಗೆ

ಶಿರಸಿ: ಬಸ್ ನಲ್ಲಿ ಬಿಟ್ಟು ಹೋಗಿದ್ದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮರಳಿ ಪ್ರಯಾಣಿಕರಿಗೆ ನೀಡಿ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದ ಘಟನೆ ಶಿರಸಿ ಯಲ್ಲಿ ನಡೆದಿದೆ. ಹಾನಗಲ್ ಶಿರಸಿಮಾರ್ಗವಾಗಿ ಸಂಚರಿಸುವ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಇಸಳೂರಿನಿಂದ ಕವಿತಾ ಹಾಗೂ ಅವರ ಪುತ್ರ ಬಸ್ ಹತ್ತಿ ಶಿರಸಿ ಗೆ ಬಂದಿದ್ದರು. ಬಸ್ ಇಳಿಯುವ ಆತುರದಲ್ಲಿ ಬಸ್ ನಲ್ಲಿಯೇ ಬ್ಯಾಗ್ ಬಿಟ್ಟು ಇಳಿದು ಹೋಗಿದ್ದರು. ಮತ್ತೊಂದು ಬಸ್ ಹತ್ತಿ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಗೆ ಹೋದ ತಕ್ಷಣ ತಮ್ಮ ಬ್ಯಾಗ್ ನಾಪತ್ತೆ ಯಾಗಿರುವುದು ಗಮನಕ್ಕೆ ಬಂದಿದೆ.

ಬಾಲಕನ ಅಪಹರಣ ಪ್ರಕರಣ: ಮಾಸ್ಟರ್ ಮೈಂಡ್ ಬಂಧನ: ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡ ಬಾಲಕನ ಅಜ್ಜ!

ತಕ್ಷಣ ಶಿರಸಿ ಡಿಪೋಗೆ ಕರೆಮಾಡಿ ವಿಚಾರಿಸಿದ್ದಾರೆ. ಅಷ್ಟರೋಳಗೆ ಹಾನಗಲ್ ಶಿರಸಿ ಬಸ್ ನ ಚಾಲಕ ವಿನೋದ್ ನಾಯ್ಕ ಹಾಗೂ ನಿರ್ವಾಹಕ ಸೇವಾ ನಾಯ್ಕ ರಾಥೋಡ್ ಬಸ್ ನನ್ನು ಡಿಪೋಗೆ ತಂದಾಗ ಅಲ್ಲೀ ಚಿನ್ನಾಭರಣ ವಿರುವ ಬ್ಯಾಗ್ ಕಂಡು ಬಂದಿತ್ತು.ಅದನ್ನು ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ನೀಡಿದ್ದರು. ಚಿನ್ನಾಭರಣ ಕಳೆದುಕೊಂಡಿದ್ದ ಕವಿತಾ ಅವರನ್ನು ಸಂಪರ್ಕಿಸಿದ ಅಧಿಕಾರಿಗಳು ಚಿನ್ನಾಭರಣ ವನ್ನು ಮರಳಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಶಿರಸಿ ವಿಭಾಗೀಯ ಡಿ ಸಿ ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button