ಕುಮಟಾ: ಆಗಸ್ಟ್ 5ರಂದು ನಡೆಯಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವವು ಈ ಬಾರಿ ಕೊರೊನಾ ಮಹಾಮಾರಿಯ ಕಾರಣಕ್ಕೆ ಪಟ್ಟಣದ ಹೆರವಟ್ಟಾದ ಶ್ರೀ ರಾಘವೇಂದ್ರ ಮಠದಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷೆ ಮೀರಾ ಶಾನಭಾಗ ತಿಳಿಸಿದ್ದಾರೆ.
ಕೊರೊನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧಾನ ಮಹೋತ್ಸವನ್ನು ಈ ಬಾರಿ ಸಾರ್ವಜನಿಕವಾಗಿ ಆಚರಿಸದೇ ಕೇವಲ ಸಾಂಕೇತಿಕವಾಗಿ ಮಾತ್ರ ಆಚರಿಸುತ್ತೇವೆ. ಅಂದು ಭಕ್ತಾಧಿಗಳು ತಮ್ಮ ಮನೆಯಲ್ಲಿಯೇ ಶ್ರೀಗುರುಗಳ ಸ್ಮರಣೆ, ಭಜನೆ, ಪಾರಾಯಣಗಳಿಂದ ಆರಾಧಿಸಿ ಪುನೀತರಾಗಬೇಕು. ಅಂದು ನಮ್ಮ ವೃಂದಾವನ ಮಠದಲ್ಲಿ ಯಾರಿಗೂ ಪ್ರವೇಶ ಅಥವಾ ಪೂಜಾ ಸೇವೆ ಅಥವಾ ಪ್ರಾರ್ಥನೆಗೆ ಅವಕಾಶವಿಲ್ಲ. ಭಕ್ತಾಧಿಗಳು ಸಹಕರಿಸುವಂತೆ ಅಧ್ಯಕ್ಷರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.