ಜನವರಿ 29 ರಂದು ಕಾರವಾರದಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ವಾಕಥಾನ್ ಸ್ಪರ್ಧೆ

ಕಾರವಾರ: ರೋಟರಿ ಕ್ಲಬ್ ಕಾರವಾರ ಪಶ್ಚಿಮದ ವತಿಯಿಂದ ಜ.29 ರಂದು ತಾಲೂಕಿನ ಸುತ್ತಮುತ್ತಲಿನ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ವಾಕಥಾನ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಪಶ್ಚಿಮದ ಅಧ್ಯಕ್ಷ ಪ್ರಕಾಶ ರೇವಣಕರ್ ಹೇಳಿದರು. ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಮೂರನೇ ವರ್ಷದ ವಾಕಥಾನ್ ಆಯೋಜಿಸಲಾಗುತ್ತಿದೆ. 15 ವರ್ಷ ಕೆಳಗಿನ ಹಾಗೂ 60 ವರ್ಷ ಮೇಲ್ಪಟ್ಟ ಸ್ಪರ್ಧಾಳುಗಳಿಗೆ 5 ಕಿ.ಮೀ ಸ್ಪರ್ಧೆ ಇರಲಿದ್ದು ನೋಂದಣಿ ಶುಲ್ಕ 100 ರೂಪಾಯಿ ಇದೆ. ಇನ್ನು 15 ವರ್ಷ ಮೇಲ್ಪಟ್ಟ ಹಾಗೂ 59 ವರ್ಷ ಒಳಗಿನವರಿಗೆ 10 ಕಿ.ಮೀ ಸ್ಪರ್ಧೆ ಏರ್ಪಡಿಸಲಾಗಿದೆ. ಇವರಿಗೆ ನೋಂದಣಿ ಶುಲ್ಕವು 200 ರೂ ಇರಲಿದೆ ಎಂದರು.

ನಗರದ ಮಾಲಾದೇವಿ ಮೈದಾನದಲ್ಲಿ ವಾಕಥಾನ್‌ಗೆ ಬೆ.6.30ಕ್ಕೆ ಚಾಲನೆ ನೀಡಲಾಗುವುದು. ಈ ಬಾರಿ 500 ಕ್ಕೂ ಹೆಚ್ಚು ಸ್ಪರ್ಧಾಳುಗಳು ಆಗಮಿಸುವ ನಿರೀಕ್ಷೆ ಒದೆ. ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡುಬoದಿರುವ ರೋಟರಿ ಕ್ಲಬ್ ವತಿಯಿಂದ ಈ ಬಾರಿಯೂ ವಾಕಥಾನ್ ಮುಂದುವರಿಸಲಾಗುತ್ತಿದೆ. ಕಾರ್ಯಕ್ರಮದಿಂದ ಉಳಿಕೆಯಾಗುವ ಹಣದಿಂದ ಮತ್ತಷ್ಟು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳಲಾಗುವುದು ಎಂದರು. ಈ ವೇಳೆ ರಾಜು ಪಾಟೀಲ್, ಪಲ್ಲವಿ ಡಿಸೋಜಾ, ಮೆಹಬೂಬ್ ಸೈಯದ್ ತ್ರಿಶಾ ವೆರ್ಣೇಕರ್, ಅಂಕೂರ್ ದೇಸಾಯಿ ಇದ್ದರು.

ವಿಸ್ಮಯ ನ್ಯೂಸ್, ಕಾರವಾರ

Exit mobile version