ಸಿದ್ದಾಪುರ: ಕಳೆದ ಎರಡು ವರ್ಷದ ಅವಧಿಯಲ್ಲಿ ಮೊದಲನೇ ಹಂತದಲ್ಲಿ ನಾನು 1800 ಲೈನ್ ಮ್ಯಾನ್ ಗಳ ಹೊಸ ನೇಮಕಾತಿಗಳನ್ನು ಮಾಡಿದ್ದೇನೆ. ಹೊಸದಾಗಿ 1500 ಜನರ ನೇಮಕಾತಿ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗಿದೆ . ಈಗಾಗಲೇ ಈ ಕುರಿತು ಲಿಖಿತ ಪರೀಕ್ಷೆ ಸಹ ಜರುಗಿದೆ ಈ ಎಲ್ಲಾ ನೇಮಕಾತಿಗಳನ್ನು ಅತ್ಯಂತ ಪಾರದರ್ಶಕವಾಗಿ ಮಾಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಗೆ ಲೈನ್ ಮ್ಯಾನ್ ಗಳ ಕೊರತೆ ಇದೆ ಎಂಬ ವಿಷಯ ನನ್ನ ಗಮನದಲ್ಲಿದೆ. ಈ ಸಲ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ 110 ಜನ ಲೈನ್ ಮೆನ್ ಗಳನ್ನು ಉತ್ತರ ಕನ್ನಡ ಜಿಲ್ಲೆಗೆ ಕೊಟ್ಟಿದ್ದೇವೆ. 10 ಜನ ಲೈನ್ ಮ್ಯಾನ್ ಗಳು ಈಗಾಗಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ ಉಳಿದ 100 ಜನ ಸದ್ಯದಲ್ಲೇ ವರದಿ ಮಾಡಿಕೊಳ್ಳಲಿದ್ದಾರೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
ಅವರು ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ನಂತರ ಪಟ್ಟಣದ ಶಂಕರ ಮಠದಲ್ಲಿ ಸಭಾ ಕಾರ್ಯಕ್ರಮದಲ್ಲಿ ಹೇಳಿದರು ಸ್ಪೀಕರ್ ಕಾಗೇರಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು ವೇದಿಕೆಯಲ್ಲಿ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ