ಪಂ.ಕೃಷ್ಣೇಂದ್ರ ವಾಡೇಕರ ರವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ

ಭಟ್ಕಳದ ಶ್ರೀ ಗಜಾನನ ಕೊಲ್ಲೆ ಫೌಂಡೇಶನ್ ಮತ್ತು ಕಲಾ ಸೌರಭ ಜಂಟಿಯಾಗಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ ಸಹಭಾಗಿತ್ವದಲ್ಲಿ ಖ್ಯಾತ ಸಂಗೀತ ವಿದ್ವಾಂಸ ಪಂ.ಕೃಷ್ಣೇಂದ್ರ ವಾಡೇಕರ ರವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವು ದಿನಾಂಕ 5.02.2023 ರಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ ಶ್ರೀ ಶ್ರೀಧರ ಸ್ವಾಮಿ ಸಭಾಗೃಹದಲ್ಲಿ ಜರುಗಿತು. ಕಲಾ ಸೌರಭದ ಅಧ್ಯಕ್ಷರಾದ ಕೇದಾರ ನಾರಾಯಣ ಕೊಲ್ಲೆ ಸ್ವಾಗತಿಸಿ, ಕಲಾಸೌರಭ ನಡೆದು ಬಂದ ಹಾದಿ ಹಾಗೂ ಮುನ್ನೋಟದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಲಾವಿದರಾದ ಪಂ. ಕೃಷ್ಣೇಂದ್ರ ವಾಡೇಕರ, ತಬಲಾ ಸಂವಾದಿನಿ ಪ್ರೊ. ಗೋಪಾಲಕೃಷ್ಣ ಹೆಗಡೆ ಕಲಭಾಗ, ಹಾರ್ಮೋನಿಯಂ ಸಂವಾದಿನಿ ಸತೀಶ ಭಟ್ಟ ಹೆಗ್ಗಾರ ಹಾಗೂ ಇತರ ಕಲಾವಿದರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ ಅಧ್ಯಕ್ಷರಾದ ಡಾ. ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ.ಜಿ.ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ್ ನಾಯಕ, ಕಲಾ ಸೌರಭ ಹಾಗೂ ಶ್ರೀ ಗಜಾನನ ಕೊಲ್ಲೆ ಫೌಂಡೇಶನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಪಾರ ಸಂಖ್ಯೆಯಲ್ಲಿ ಸಂಗೀತಾಸಕ್ತರು ಉಪಸ್ಥಿತರಿದ್ದು, ಎಲ್ಲರ ಅಪಾರ ಪ್ರಶಂಸೆಗೆ ಒಳಗಾಗುವ ಮೂಲಕ ಈ ಸಂಗೀತ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊoಡಿತು. ನ್ಯೂ ಇಂಗ್ಲೀಷ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣಪತಿ ಶಿರೂರ ವಂದಿಸಿದರು ಹಾಗೂ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಫಣಿಯಪ್ಪಯ್ಯ ಹೆಬ್ಬಾರ ನಿರೂಪಿಸಿದರು.

ವಿಸ್ಮಯ ನ್ಯೂಸ್. ಭಟ್ಕಳ

Exit mobile version