ಹೊನ್ನಾವರ: ತಾಲೂಕಿನ ಬಳ್ಕೂರ ಕೊಡ್ಲಮನೆ ವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಮಹೋತ್ಸವ ಮತ್ತು 81 ವರ್ಷದ ಮಹಾ ರಥೋತ್ಸವ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಪರ್ತಗಾಳಿ ಜೀವೋತಮ ಮಠಾಧಿಶ ಪರಮ ಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿoದ ನಡೆಯಿತು, ಬ್ರಹ್ಮ ರಥದಲ್ಲಿ ರಥರೂಡನಾಗಿದ್ದ ವಿಷ್ಣೂಮೂರ್ತಿಯನ್ನು ಕಣ್ತುಂಬಿಕೊoಡ ಭಕ್ತರು, ರಥ ಎಳೆಯಯುವುದರ ಮೂಲಕ ಕೃತಾರ್ಥರಾದರು.
ರಥರೂಡನಾದ ಮಹಾವಿಷ್ಣುವಿನ ದರ್ಶನ ಪಡೆದಲ್ಲಿ ಜನ್ಮಗಳಿದ ಮಾಡಿದ ಪಾಪಗಳು ನಾಶವಾಗುತ್ತದೆ ಎನ್ನುವುದು ಪ್ರತಿತಿ, ರಥ ಏರಿದ ಮಹಾವಿಷ್ಣುವಿನ ದರ್ಶನ ಪಡೆದರೆ ತಮ್ಮ ಜೀವನದಲ್ಲಿ ಬರುವ ಕಷ್ಟ ದುಖಗಳು ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಈ ವೇಳೆ ಸಡಿಮದ್ದುಗಳನ್ನು ಸಿಡಿಸಲಾಯಿತು, ಕಾಮ-ಕ್ರೋದ-ಮದ-ಮತ್ಸರಾದಿಗಳನ್ನು ದೂರಮಾಡುವ ಸಂಕೇತವಾದ ಮೃಗಬೇಟೆ ಗಮನಸೆಳೆಯಿತು. ಮಹಾವಿಷ್ಣು ಗೆಳಯರ ಬಳಗ ಮತ್ತು ದುರ್ಗಾಂಭ ಗೆಳಯರ ಬಳಗದ ವತಿಯಿಂದ ನಾಟಕ ಪ್ರದರ್ಶನ ನಡೆದವು,
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.