ಹೆದ್ದಾರಿ ಅಂಚಿನಲ್ಲಿ ಹೆಣ್ಣು ಚಿರತೆಯ ಕಳೇಬರ ಪತ್ತೆ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ಅಂಕೋಲಾ- ಕುಮಟಾ ಮಾರ್ಗ ಮಧ್ಯೆ ಅಂಕೋಲಾ ತಾಲೂಕಿನ ಶಿರೂರು – ಕೊಡಸನಿ ಗಡಿ ಪ್ರದೇಶದಲ್ಲಿ ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಅದೆಲ್ಲಿಂದಲೋ ಬಂದಿದ್ದ ಚಿರತೆ  ಹೆದ್ದಾರಿ   ದಾಟುವಾಗ ಯಾವುದೋ ವಾಹನ ಬಡಿದು ಸಾವಿಗೀಡಾಗಿರುವ ಸಾಧ್ಯತೆ ಕೇಳಿಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ನೀಡಿದ ಮಾಹಿತಿ ಮೇರೆಗೆ ಎ.ಸಿ.ಎಫ್, ಆರ್ ಎಫ್ ಓ ಮತ್ತಿತರ ಅಧಿಕಾರಿಗಳು  ಸ್ಥಳ ಪರಿಶೀಲಿಸಿ, ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಮುಂದುವರಿಸಿದ್ದಾರೆ.

ಸುಮಾರು ಒಂದುವರೆ ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಚಿರತೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿದೆ ಎನ್ನಲಾಗಿದ್ದು,ಘಟನೆಯ ಕುರಿತಂತೆ ಅರಣ್ಯ ಇಲಾಖೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version