ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಮಂಜೂರು: ಸರ್ಕಾರದ ಆದೇಶದಲ್ಲಿ ಏನಿದೆ ನೋಡಿ?

ಕುಮಟಾ: ಉತ್ತರಕನ್ನಡ ಜಿಲ್ಲೆಯ ಬಹುದಿನದ ಕನಸೊಂದು ಈಡೇರುವ ಹಂತಕ್ಕೆ ಬಂದಿದೆ. ಹೌದು, ತಾಲೂಕಿನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗೆ ಕಾಯ್ದಿರಿಸಿದ್ದ ಜಮೀನಿನಲ್ಲಿ 15-35-00 ಕ್ಷೇತ್ರವನ್ನು ಹಿಂದಕ್ಕೆಪಡೆಯಲಾಗಿದ್ದು, ಈ ಜಾಗದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಿಂದಿರುಗಿಸುವ ಕುರಿತ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿದೆ.

ಕುಮಟಾ ಗ್ರಾಮದ ಸರ್ವೆ ನಂ. 440 ಅ/ಬ ರ ಪೈಕಿ ಕ್ಷೇತ್ರ 17-14ನ್ನು ಏಕಲವ್ಯ ಮಾದರಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸಿರುವ ಜಮೀನಿನ ಪೈಕಿ 15-35 ಜಮೀನನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಹಿಂದಿರುಗಿಸುವ ಷರತ್ತಿಗೊಳಪಟ್ಟು ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳು ಉತ್ತರಕನ್ನಡ ಜಿಲ್ಲೆ ಇವರಿಗೆ ಹಂಚಿಕೆಮಾಡಿ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಜಾಗದ ಗೊಂದಲಕ್ಕೆ ತೆರೆ ಬಿದ್ದಂತಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನೆರವೇರಲಿದೆ ಎಂದು ಶಾಸಕ ದಿನಕರ ಶೆಟ್ಟಿಯವರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version