ಏಕಾಏಕಿ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

ಹೊನ್ನಾವರ: ಪ್ರಯಾಣಿಸುತ್ತಿದ್ದ ಕಾರ್ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಡಸ್ಟರ್ ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ಪಟ್ಟಣದ ಮೂರಕಟ್ಟೆ ಸಮೀಪ ರಾತ್ರಿ ನಡೆದಿದೆ. ಹೊನ್ನಾವರದಿಂದ ಚಿಕ್ಕೊಳ್ಳಿಗೆ ಹೋಗುವಾಗ ಪ್ರಭಾತನಗರದ ಮೂರುಕಟ್ಟೆ ಬಳಿ ಈ ಘಟನೆ ನಡೆದಿದೆ. ಚಿಕ್ಕೊಳ್ಳಿಯ ಜಗದೀಶ ಗೌಡ ಎಂಬುವರ ಕಾರು ಇದಾಗಿದೆ. ಜಗದೀಶ ಅವರು ಹಾಗೂ ಅವರ ಸ್ನೇಹಿತರು ಹೊನ್ನಾವರದಿಂದ ಚಿಕ್ಕೊಳ್ಳಿಗೆ ಹೋಗುವಾಗ ಪ್ರಭಾತನಗರದ ಶಿವಸಾಗರ ರೆಸಿಡೆನ್ಸಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಆಂಬುಲೆನ್ಸ್ ಬಡಿದು ಪಾದಾಚಾರಿ ಸಾವು| ಹೆದ್ದಾರಿ ಕ್ರಾಸ್ ಮಾಡುವಾಗ ನಡೆದ ಆವಾಂತರ

ಕಾರ್ ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಏಕಾಏಕಿ ಬೆಂಕಿ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಅಗತ್ಯ ಕಾಗದ ಪತ್ರಗಳು ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಕೆಲಕಾಲ ಆತಂಕಗೊಂಡರು. ಬೆಂಕಿ ನಂದಿಸಲು ನೀರು ಸಿಗದೆ ಪರದಾಡಿದರು. ನಂತರ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿದರು. ಪ್ರಯಾಣಿಸುತ್ತಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ..

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version