ಪತಿ- ಪತ್ನಿ ಗಲಾಟೆ: ಸಾವಿಗೆ ಶರಣಾದ ಹೆಂಡತಿ

ಸಿದ್ದಾಪುರ : ಪತಿ ಪತ್ನಿಯ ನಡುವೆ ಗಲಾಟೆ ನಡೆದು ಸಿಟ್ಟಿನಿಂದ ಪತ್ನಿ ನೇಣಿಗೆ ಶರಣಾದ ಘಟನೆ ತಾಲೂಕಿನ ಕಾನಸೂರನಲ್ಲಿ ನಡೆದಿದೆ . ಲೀಲಾವತಿ ಅನಿಲ್ ನಾಯ್ಕ್ (30) ನೇಣಿಗೆ ಶರಣಾದ ಮಹಿಳೆ.

ಗಂಡ ಹೆಂಡತಿ ಆಗಾಗ ಸಣ್ಣ ಪುಟ್ಟ ಜಗಳ ಮಾಡಿಕೊಳ್ಳುತ್ತಿದ್ದರ.ಗುರುವಾರ‌ ಫೋನಿನಲ್ಲಿ ಗಲಾಟೆ ಮಾಡಿಕೊಂಡು ಸಿಟ್ಟುಗೊಂಡ ಪತ್ನಿ ಮನೆಯ ಗಳವೊಂದಕ್ಕೆ ವೇಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ‌ ಸಿದ್ದಾಪುರ

Exit mobile version