ಅಂಕೋಲಾ: ಪಟ್ಟಣದ ಮಠಾಕೇರಿಯಲ್ಲಿ ನಡೆದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿತ ಸುಬ್ರಾಯ ಯಾನೆ ಅಜಯ ಅಚ್ಯುತ್ ಪ್ರಭು ಎಂಬಾತನಿಗೆ ದೋಷಿಯೆಂದು ತೀರ್ಮಾನಿಸಿ ತೀರ್ಪು ಪ್ರಕಟಿಸಿದೆ.
ಪಿತ್ರಾರ್ಜಿತ ಆಸ್ತಿಯ ಪಾಲು ವಿಷಯದಲ್ಲಿ ಇದ್ದ ದ್ವೇಷದಿಂದ ಆರೋಪಿ ಅಜಯ ಪ್ರಭು ಆಸ್ತಿ ಪಾಲು ಮಾಡದೇ ಇರಲು ತನ್ನ ತಮ್ಮನ ಹೆಂಡತಿ ಮೇಧಾ ಅಮಿತ್ ಪ್ರಭು ಕಾರಣ ಎಂದು ಭಾವಿಸಿ 2019 ರ ಜುಲೈ 27ರಂದು ಸಂಜೆ ತನ್ನ ಮನೆಯ ಕೆಳ ಮಹಡಿಯಲ್ಲಿರುವ ತಮ್ಮ ಅಮೀತ ಪ್ರಭು ಮನೆಗೆ ಲೋಡ್ ಆದ ಬಂದೂಕಿನೊಂದಿಗೆ ಅಕ್ರಮ ಪ್ರವೇಶ ಮಾಡಿ ತಾಯಿ ತಡೆಯಲು ಪ್ರವೇಶಿಸಿದರೂ ಕೇಳದೇ ಮಗನಿಗೆ ಶಾಲೆಯ ಪಾಠ ಹೇಳಿಕೊಡುತ್ತಿದ್ದ ಮೇಧಾ ಪ್ರಭು ಅವಳ ತಲೆಗೆ ಗುಂಡು ಹಾರಿಸಿದ ಪರಿಣಾಮ ಗುಂಡು ಮಗ ಅನೂಜ್ ಪ್ರಭು ತಲೆಯ ಎಡಬದಿಗೆ ತಾಗಿದ ಪರಿಣಾಮ ಅನೂಜ್ ಪ್ರಭು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಮೃತ ಪಟ್ಟಿದ್ದು ಮೇಧಾ ಪ್ರಭು ಮಣಿಪಾಲ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿ
ಮೃತ ಪಟ್ಪಿದಳು.
ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಇದೀಗ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆರೋಪಿ ಅಜಯ ಪ್ರಭು ದೋಷಿ ಮತ್ತು ಶಿಕ್ಷೆಗೆ ಅರ್ಹ ಎಂದು ತೀರ್ಪು ನೀಡಿದ್ದು, ಏಪ್ರಿಲ್ 24 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನಿಜಾ ಹೊಸಪಟ್ಟಣ ಸಾಕ್ಷಿ ವಿಚಾರಣೆ ನಡೆಸಿದ್ದು ಈಗಿನ ಪ್ರಭಾರಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್
ಆರೋಪಿಯನ್ನು ಶಿಕ್ಷೆಗೆ ಒಳಪಡಿಸುವಂತೆ ಬಲವಾದ ವಾದ ಮಂಡಿಸಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ