ಹೊನ್ನಾವರ: ತಾಲೂಕಿನ ಚಂದಾವರ ಚೆಕ್ ಪೊಸ್ಟ್ ನಲ್ಲಿ ಚುನಾವಣಾಧಿಕಾರಿಗಳು ತಪಾಸಣೆ ಮಾಡುತ್ತಿದ್ದ ವೇಳೆ ಆಟೋ ಒಂದರಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 93 ಲಕ್ಷ 50 ಸಾವಿರ ಹಣ ಪತ್ತೆಯಾಗಿದ್ದು, ಆರೋಪಿ ಹಾಗೂ ಆಟೋ ವಶಕ್ಕೆ ಪಡೆದುಕೊಂಡ ಘಟನೆ ಚೆಂದಾವರದ ಚೆಕ್ ಪೊಸ್ಟ್ ಬಳಿ ಬೆಳಗ್ಗಿನ ಜಾವ ನಡೆದಿದೆ.
ಶಿವಮೊಗ್ಗದಿಂದ ಕುಮಟಾಕ್ಕೆ ಆಟೋದಲ್ಲಿ ಹಣ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಈ ವೇಳೆ ಚೆಂದಾವರದ ಅರಣ್ಯ ಇಲಾಕೆ ಚೆಕ್ ಪೊಸ್ಟ್ ನಲ್ಲಿ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವ ವೇಳೆ ಕೋಟ್ಯಾಂತರ ರೂಪಾಯಿ ಪತ್ತೆಯಾಗಿದೆ. ಮತದಾರರಿಗೆ ಹಂಚಿಕೆ ಮಾಡಲು ಕೋಟ್ಯಾಂತರ ಹಣ ತರಲಾಗುತ್ತಿತ್ತು ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ