ಅಂಕೋಲಾ: ಹಟ್ಟಿಕೇರಿ ಟೋಲ್ ಗೇಟ್ ಪಕ್ಕದ ಗೌರಿಕೆರೆ ಬಳಿ ನಿರ್ಮಿಸಲಾದ ವಿಶೇಷ ಹ್ಯಾಲಿಪ್ಯಾಡನಲ್ಲಿ ಮದ್ಯಾಹ್ನ 1.50 ರ ಸುಮಾರಿಗೆ ನರೇಂದ್ರ ಮೋದಿ ಬಂದಿಳಿಯುತ್ತಿದ್ದoತೆ ಜಯಘೋಷ ಮೊಳಗಿಸಿ ಜನರು ತಮ್ಮ ಪ್ರೀತಿ ಹಾಗೂ ಅಭಿಮಾನ ತೋರ್ಪಡಿಸಿದರು. ಬೆಳಿಗ್ಗೆ 7 ಘಂಟೆಯಿoದಲೇ ತಾಲೂಕು, ಜಿಲ್ಲೆ ಹಾಗೂ ರಾಜ್ಯ – ಹೊರ ರಾಜ್ಯ ಸೇರಿದಂತೆ ಜನರ ದಂಡೇ ತಮ್ಮ ನೆಚ್ಚಿನ ಜನ ನಾಯಕನನ್ನು ನೋಡಲು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದರು.. ಖಾಸಗಿ ವಾಹನಗಳು ಸೇರಿ ಸಾವಿರಾರು ವಾಹನಗಳ ಭರಾಟೆ ಜೋರಾಗಿತ್ತು. ಮೋದಿ ಆಗಮನದಿಂದ ಗೌರಿಕೆರೆ ಪ್ರದೇಶದಲ್ಲಿ ಧೂಳಿನಲ್ಲಿಯೇ ಕಮಲ ಎದ್ದು ರಾರಾಜಿಸುವಂತಾಗಿದೆ..
ಬಿಜೆಪಿ ಪಕ್ಷದ ಪಾಲಿಗಂತೂ ಮೋದಿಯವರ ಈ ಕಾರ್ಯಕ್ರಮ ಆನೆ ಬಲ ತರಲಿದೆ ಎಂದೇ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.ಪಕ್ಷದ ಹಿರಿ-ಕಿರಿಯ ನಾಯಕರು,ಕಾರ್ಯಕರ್ತರ ಹೊರತಾಗಿ ಮೋದಿಯವರನ್ನು ನೋಡಲೆಂದೇ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಎಸ್ ಪಿ ಜಿ ಸೇರಿದಂತೆ ಸ್ಥಳೀಯ ಪೊಲೀಸರು ಸೇರಿ ಸಾವಿರಾರು ಸಂಖ್ಯೆಯ ರಕ್ಷಣಾ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಏರ್ಪಡಿ ಸಿದ್ದಾರೆ. ಸುಡು ಬಿಸಿಲನ್ನೂ ಲೆಕ್ಕಿಸದೇ ಲಕ್ಷ ಲಕ್ಷ ಸಂಖ್ಯೆಯ ಜನರು ಜಮಾಯಿಸಿದ್ದರಾದ್ದರು. ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, ಪಕ್ಷದ ಪ್ರಮುಖರು, ಪ್ರಭಾರಿಗಳು ಹಾಗೂ ನಾಯಕರು ಮತ್ತು ಕಾರ್ಯಕರ್ತರು ಸೇರಿದಂತೆ ನೆರೆದ ಸಮಸ್ತ ಜನತೆಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೆ ತನ್ನ ಕ್ಷೇತ್ರದ ಪರವಾಗಿ ಹಾಗೂ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದರು.
ಮೊದಲು ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿ, ಜಿಲ್ಲೆಯ ಪ್ರಾಕೃತಿಕ ಸೌಂದರ್ಯದ ಕುರಿತು ಮಾತನಾಡಿ, 140 ಕೋಟಿ ಭಾರತೀಯರೇ ನಮ್ಮ ರಿಮೋಟ್ ಕಂಟ್ರೋಲ್ ಎಂದರಲ್ಲದೇ, ತಾವೆಲ್ಲರೂ ಕಮಲದ ಗುರುತಿಗೆ ವೋಟ್ ಮಾಡಿದರೆ ಕರ್ನಾಟಕವನ್ನು ನಂಬರ 1 ಮಾಡಲಾಗುವುದು. ಕರ್ನಾಟಕದ ಜನತೆ ನಾಲ್ಕು ಕಡೆಯೂ ಒಂದೇ ಮಂತ್ರ ಪಠಿಸುತ್ತಿದ್ದು, ಈ ಬಾರಿಯ ನಿರ್ಧಾರ, ಡಬಲ್ ಇಂಜಿನ್ ಸರ್ಕಾರ ಮುಂದುವರೆಸಲು ಬಿಜೆಪಿಯ ಸರ್ಕಾರ ಎಂದರು. ಕರೋನಾ ಮತ್ತಿತರ ಸಂಕಷ್ಟ ಕಾಲದಿಂದ ಜನರನ್ನು ಪಾರು ಮಾಡಿದ ಬಿಜಿಪಿ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, ಇಲ್ಲಿಯ ಮೀನುಗಾರರು ಸಹಿತ ಇತರ ಜಾತಿ – ಜನಾಂಗಗಳ ಅಭ್ಯುದಯಕ್ಕೆ ಸರ್ಕಾರ ಬದ್ಧವಾಗಿದೆ. ಇಲ್ಲಿಯ ಹಾಲಕ್ಕಿ ಮಹಿಳೆಯರಾದ ತುಳಸಿಗೌಡ ಹಾಗೂ ಸುಕ್ರಿ ಗೌಡ ಅವರು ಪದ್ಮಶ್ರೀ ಪುರಸೃತರಾಗಿರುವುದನ್ನು ಉಲ್ಲೇಖಿಸಿದ ಮೋದಿ, ಮೊಬೈಲ್ ಪ್ಯಾಶ್ ಲೈಟ್ ಆನ್ ಮಾಡುವಂತೆ ಸೂಚಿಸಿದ ಮೋದಿ, ಇಲ್ಲಿರುವ ಪ್ರತಿಯೊಬ್ಬರೂ ನನ್ನ ಪರವಾಗಿ ತಮ್ಮ ತಮ್ಮ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕೈ ಮುಗಿದು ಓಟು ಕೇಳಬೇಕು ಎಂದರು.
ಉತ್ತರ ಕನ್ನಡ ಅಂಕೋಲಾ ಪ್ರದೇಶವು ತನ್ನ ಪ್ರಕೃತಿಯ ಸೌಂದರ್ಯಕ್ಕೆ, ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಇದು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ನಾನು ಆಧ್ಯಾತ್ಮಿಕತೆಯ ವಿವಿಧ ಕೇಂದ್ರಗಳಿಗೆ ತಲೆಬಾಗುತ್ತೇನೆ. 40 ವರ್ಷಗಳ ನಂತರ ಪ್ರಧಾನಿಯೊಬ್ಬರು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ ಎಂದು ಸಹ ಪ್ರಧಾನ ಮಂತ್ರಿಗಳು ಹೇಳಿದರು. ಕಾಂಗ್ರೆಸ್ ತನ್ನ ನಾಯಕರೊಬ್ಬರ ನಿವೃತ್ತಿಯ ಹೆಸರಿನಲ್ಲಿ ಮತ ಕೇಳುತ್ತಿದೆ. ನನ್ನನ್ನು ನಿಂದಿಸಿ ಮತ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ಗಾಳಿ ಸಂಸ್ಕೃತಿಗೆ ಜಾಗವಿಲ್ಲ. ಮೇ 10 ರಂದು, ನೀವು ಮತ ಚಲಾಯಿಸಿದಾಗ, ‘ಜೈ ಭಜರಂಗ ಬಲಿ’ ಎಂದು ಪಠಿಸಿ, ಕಾಂಗ್ರೆಸ್ ನ್ನು ಸೋಲಿಸಿ ಶಿಕ್ಷೆ ನೀಡಿ ಎಂದು ಕರ್ನಾಟಕ ಜನತೆಗೆ ಮನವಿ ಮಾಡಿಕೊಂಡರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ