ಬಿಸಿಲಿನ ತಾಪದಲ್ಲಿ ಬೆಂದಿದ್ದ ಉತ್ತರಕನ್ನಡ ಜಿಲ್ಲೆಯ ಜನರಿಗೆ ತಂಪೆರೆದ ಮಳೆ: ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಕುಮಟಾ: ಇಷ್ಟು ದಿನಗಳ ಕಾಲ ಬಿಸಿಲಿನ ತಾಪದಲ್ಲಿ ಬೆಂದಿದ್ದ ಉತ್ತರಕನ್ನಡ ಜಿಲ್ಲೆಯ ಜನರಿಗೆ ಮಳೆರಾಯ ತಂಪೇರೆದಿದೆ. ಕುಮಟಾ ತಾಲೂಕಿನಲ್ಲಿ ಕೂಡಾ ಇಂದು ಮುಂಜಾನೆಯಿದಂಲೇ ವರುಣನ ಆರ್ಭಟ ಜೋರಾದ ದೃಷ್ಯ ಕಂಡು ಬಂತು. ಹೌದು, ತಾಲೂಕಿನಾದ್ಯಂತ ಮುಂಜಾನೆಯಿಂದಲೇ ಭಾರಿ ಮಳೆ ಸುರಿದಿದ್ದು, ಬಿಸಿಲಿನ ಬೇಗೆಗೆ ಬರಡಾಗಿದ್ದ ಭೂಮಿಯು ಮಳೆರಾಯನ ಸ್ಪರ್ಷದಿಂದ ತಂಪಾದಂತಾಗಿದೆ. ಇನ್ನು ಮಳೆಗಾಲದ ಮುಂಜಾಗೃತ ಕ್ರಮವಾಗಿ ಕುಮಟಾ ಪಟ್ಟಣದಲ್ಲಿ ಪುರಸಭೆಯ ವತಿಯಿಂದ ರಾಜ ಕಾಲುವೇ ಹಾಗೂ ಗಟಾರಗಳ ಸ್ವಚ್ಚತಾ ಕಾರ್ಯ ನಡೆದಿದೆ ಎಂದು ಕುಮಟಾ ಪುರಸಭಾ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಗಟಾರಗಳ ಹೂಳೆತ್ತುವ ಕಾರ್ಯ ಯಾವ ರೀತಿಯಾಗಿ ನಡೆದಿದೆ, ಇದರಿಂದಾಗಿ ಸಾರ್ವಜನಿಕರಿಗೆ ಯಾವ ರೀತಿಯ ಅನುಕೂಲ ಆಗಲಿದೆ ಎಂಬುದನ್ನು ಮುಂಬರುವ ದಿನದಲ್ಲಿ ಕಾದುನೋಡಬೇಕಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಅತ್ಯಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಇದೇ ವೇಳೆ, ರಾಜ್ಯಾದ್ಯಂತ ಬಿರುಗಾಳಿ ಸಹಿತ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Exit mobile version