ಬಾಡಿಗೆ ಏಕಾಏಕಿ ಎಂಟುಪಟ್ಟು ಹಚ್ಚಳಕ್ಕೆ ಆಕ್ಷೇಪ: ಉಸ್ತುವಾರಿ ಸಚಿವರ ಭೇಟಿ ಮಾಡಿ ಮನವಿ ಸಲ್ಲಿಕೆ: ಆದೇಶಕ್ಕೆ ತಡೆ

ಕುಮಟಾ: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಳೆದ 35 ವರ್ಷಗಳಿಂದ ಮಳಿಗೆಗಳನ್ನು ಬಾಡಿಗೆಗೆ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಪೇಟೆ ಕಾರ್ಯಕರ್ತರಿಗೆ ಪ್ರತಿ ವರ್ಷ ಶೇ 5 ರಂತೆ ಏರಿಕೆ ಮಾಡಿ ವಿಧಿಸುತ್ತಿದ್ದ ಬಾಡಿಗೆಯನ್ನು ಏಕಾಏಕಿ ಎಂಟು ಪಟ್ಟು ಹೆಚ್ಚು ಮಾಡಿದ್ದನ್ನು ಸರಕಾರದ ಗಮನಕ್ಕೆ ತಂದು ನ್ಯಾಯ ಪಡೆದುಕೊಳ್ಳಲು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಮಂಕಾಳು ವೈದ್ಯ ಇವರನ್ನು ಇವರ ಭಟ್ಕಳ ತಾಲೂಕಿನ ಗೃಹ ಕಚೇರಿಯಲ್ಲಿ ಅರವಿಂದ ಕೃಷ್ಣರಾವ್ ಪೈ ಪೇಟೆ ಕಾರ್ಯಕರ್ತರ ಪ್ರತಿನಿಧಿ ಇವರ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ತಕ್ಷಣ ಮನವಿಗೆ ಸ್ಪಂದಿಸಿದ ಸನ್ಮಾನ್ಯ ಉಸ್ತುವಾರಿ ಸಚಿವರು ಮೊಬೈಲ್ ಮೂಲಕ ಎಪಿಎಂಸಿ ಹೆಚ್ಚುವರಿ ನಿರ್ದೇಶಕರಾದ ಶ್ರೀ ನಾಗೇಶ್ವರ ಇವರನ್ನು ಸಂಪರ್ಕಿಸಿ ಕುಮಟಾ ಮಾರುಕಟ್ಟೆ ಪ್ರಾಣದಲ್ಲಿ ಮಳಿಗೆಗಳ ಬಾಡಿಗೆಯನ್ನು ಏಕಾಏಕಿ ಎಂಟು ಪಟ್ಟು ಏರಿಕೆ ಮಾಡಿದ್ದನ್ನು ತಡೆಹಿಡಿಯಲು ಸೂಚಿಸಿದರು ಮತ್ತು ಮುಂದಿನ ದಿನಗಳಲ್ಲಿ ಎಪಿಎಂಸಿ  ಕಾಯ್ದೆ ಬದಲಾವಣೆ ಹಾಗೂ ಆಡಳಿತ ಮಂಡಳಿಗೆ ಚುನಾವಣಾ ನಡೆಯಲಿದ್ದು, ಅಲ್ಲಿಯವರೆಗೆ ಈ ಹಿಂದಿನಂತೆ ಶೇ 5 ರಂತೆ ಬಾಡಿಗೆ ಏರಿಕೆ ಮಾಡಿ ಮಳಿಗೆಗಳನ್ನು ಮುಂದುವರಿಸಲು ನಿರ್ದೇಶನ ನೀಡಿದರು.

ಈ ವೇಳೆಯಲ್ಲಿ ಕುಮಟಾ ಎಪಿಎಂಸಿ ಪೇಟೆ ಕಾರ್ಯಕರ್ತರ ಪರವಾಗಿ ಸನ್ಮಾನ್ಯ ಸಚಿವರಿಗೆ ಫೇಟಾ ತೊಡಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮನವಿ ಸಲ್ಲಿಸಿದ ನಿಯೋಗದಲ್ಲಿ ಅರವಿಂದ  ಪೈ ರವರೊಂದಿಗೆ ಶ್ರೀ ಗಜು ಕಡೆಕೋಡಿ, ಶ್ರೀ ದೀಪಕ್ ಕಾಮತ್ ,ಶ್ರೀ ಗಣಪತಿ ಭಟ್, ಶ್ರೀ ಉದಯ್ ಭಟ್, ಶ್ರೀ ಸತೀಶ್ ಭಟ್, ಶ್ರೀ ಮಹೇಶ   ಶಾನಭಾಗ್  ಇನ್ನಿತರರು ಇದ್ದರು.

ವಿಸ್ಮಯ ನ್ಯೂಸ್‌, ಕುಮಟಾ

Exit mobile version