ತವರು ಮನೆಯ ಮುಂಬಾಗದ ಚಿಕ್ಕಪ್ಪನ ತೋಟದ ಬಾವಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

ಯಲ್ಲಾಪುರ: ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಂದೊಳ್ಳಿ ಪಂಚಾಯತ್ ವ್ಯಾಪ್ತಿಯ ಕಣ್ಣೀಮನೆ ಗ್ರಾಮದ ಖಾಸಗಿ ಶಾಲೆಯಲ್ಲಿ ನಡೆದಿದೆ. ನಂದೊಳ್ಳಿ ಪಂಚಾಯತ್ ವ್ಯಾಪ್ತಿಯ ಕನ್ನಡಕಲ್ ಗ್ರಾಮದ ಯಶೋಧ ಮಹಾಭಲೇಶ್ವರ ಹೆಗಡೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಇದನ್ನೂ ಓದಿ: Railway Recruitment 2023 : SSLC , ITI ಪಾಸಾದವರು ಅರ್ಜಿ ಸಲ್ಲಿಸಬಹುದು

ಈಕೆ ಸೋಮವಾರ ರಾತ್ರಿಯ ಸಮಯ ಇಲ್ಲವೇ ಮಂಗಳವಾರ ನಸುಕಿನ ಜಾವದಲ್ಲಿ ತನ್ನ ತವರು ಮನೆಯ ಮುಂಬಾಗದ ಚಿಕ್ಕಪ್ಪನ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಲಾಗಿದೆ. ಸ್ಥಳಕ್ಕೆ ಯಲ್ಲಾಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version