ಪೋಲಿಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದಿದ ವ್ಯಕ್ತಿ ಸಾವು ಪ್ರಕರಣ – ಹೊನ್ನಾವರಕ್ಕೆ ಸಿಓಡಿ ಅಧಿಕಾರಿಗಳ ತಂಡ – ಸಿ. ಸಿ. ಕ್ಯಾಮರಾ ಪುಟೇಜ್, ಹಾಜರಾತಿ ಪುಸ್ತಕ ಸೇರಿದಂತೆ ದಾಖಲೆ ಪರಿಶೀಲನೆ

ಹೊನ್ನಾವರ: ಪೋಲಿಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದಿದ ವ್ಯಕ್ತಿ ಮೃತಪಟ್ಟ ಘಟನೆಗೆ ಸಂಬoಧಪಟ್ಟoತೆ ಮುಂದಿನ ವಿಚಾರಣೆಗೆ CID ಅಧಿಕಾರಿಗಳ ತಂಡ ಬೆಂಗಳೂರಿನಿ0ದ ಹೊನ್ನಾವರಕ್ಕೆ ಆಗಮಿಸಿದೆ. ಹಿರಿಯ ಪೋಲೀಸ್ ಅಧಿಕಾರಿಗಳ ತನಿಖೆಯ ನಂತರ ಪ್ರಕರಣ CID ಗೆ ಹಸ್ತಾಂತರಿಸಲಾಗಿದ್ದು, ಇದೀಗ ಇಡೀ ಘಟನೆಯ ತನಿಖೆ CID ಅಂಗಳಕ್ಕೆ ಬಿದ್ದಂತೆ ಆಗಿದೆ. CID ಡಿ. ವೈ. ಎಸ್. ಪಿ, ಸಿ. ಪಿ. ಐ ಇನ್ನಿಬ್ಬರು ಸಿಬ್ಬಂದಿಗಳು ಮೊದಲ ಹಂತವಾಗಿ ಠಾಣೆಗೆ ಸಂಭoದ ಪಟ್ಟ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು, ಸಿ. ಸಿ. ಕ್ಯಾಮರಾ ಪುಟೇಜ್, ಹಾಜರಾತಿ ಪುಸ್ತಕ ಇನ್ನಿತರ ದಾಖಲೆ ಪರಿಶೀಲನೆ ಮಾಡಿ, ಕೆಲವರಿಂದ ಮಾಹಿತಿ ಕಲೆ ಹಾಕಿ ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.

ಕಳೆದ ಮೂರು ದಿನದ ಹಿಂದೆ ಹೊನ್ನಾವರ ಪೋಲಿಸ ಠಾಣೆಯಲ್ಲಿ ಬೀಹಾರ ಮೂಲದ ವ್ಯಕ್ತಿ ಪ್ರಕರಣ ಒಂದಕ್ಕೆ ವಿಚಾರಣೆಗೆ ಬಂದಾಗ ಮೃತ ಪಟ್ಟಿರುವ ಘಟನೆ ತಾಲೂಕಿನಲ್ಲಿ ಚರ್ಚೆಗೆ ಕಾರಣವಾಗಿತ್ತು. ಹೊನ್ನಾವರದ ಇತಿಹಾಸದಲ್ಲಿ ಈ ಘಟನೆ ಅಧಿಕೃತವಾಗಿ ಮೊದಲ ಘಟನೆ ಆಗಿದೆ ಅನ್ನು ಅಭಿಪ್ರಾಯ ವ್ಯಕ್ತವಾಗಿದೆ. ಮೂರುದಿನದಿಂದ ಪೋಲಿಸ್ ವರಿಷ್ಠ ಅಧಿಕಾರಿಗಳು ವಿವಿಧ ಹಂತದಲ್ಲಿ ತನಿಕೆ ಮಾಡಿ ಎರಡು ಜನ ಫೋಲಿಸ್ ಅಧಿಕಾರಿಗಳನ್ನ, ಮೂರು ಜನ ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಆದೇಶ ಮಾಡಿದ್ದರು.

CID ಅಧಿಕಾರಿಗಳ ಪ್ರವೇಶದಿಂದ ಪ್ರಕರಣದ ಹೊಸ ದಿಕ್ಕಿನತ್ತ ತಲುಪಿದ್ದು, ಘಟನೆಯ ಸತ್ಯಾಸತ್ಯತೆ CID ತನಿಖೆಯಿಂದ ಹೊರಬರಬೇಕಿದೆ. ಪ್ರಕರಣ ಸಿಬಿಐ ಹಸ್ತಾಂತರ ನಂತರ ಶವ ಪರಿಕ್ಷೇಯ ವರದಿ, ದೂರುದಾರನ ವಿಚಾರಣೆ, ಕುಟುಂದ ಸದಸ್ಯರಿಂದ ಮಾಹಿತಿ ಕಲೆ ಹಾಕಿ ಪ್ರಕರಣದ ತನಿಕೆ ನಡೆಸಲಿದ್ದಾರೆ.

ಒಟ್ಟಿನಲ್ಲಿ ಹೊನ್ನಾವರ ಪೋಲಿಸ ಠಾಣೆಯಲ್ಲಿ ವಿಷ ಕುಡಿದು ಆಸ್ಪತ್ರಯಲ್ಲಿ ಮೃತ ಪಟ್ಟಿದ್ದಾನೆ ಎನ್ನುವ ಸುದ್ದಿಗೆ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version