ಲೋಕಕಲ್ಯಾಣಾರ್ಥವಾಗಿ ಗುಣವಂತೆ ಶಂಭುಲಿoಗೇಶ್ವರನ ಸನ್ನಿಧಿಯಲ್ಲಿ ‘ಸಮಗ್ರ ನಕ್ಷತ್ರ ಮಹಾಯಜ್ಞ’

ಹೊನ್ನಾವರ: ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ಹೊನ್ನಾವರ ರಾಷ್ಟ್ರದ-ಸರ್ವರ ಯೋಗಕ್ಷೇಮಗಳನ್ನು ಭಗವಂತನಲ್ಲಿ ಪ್ರಾರ್ಥಿಸುತ್ತಾ ಕಳೆದ ಆರೇಳು ವರ್ಷಗಳಿಂದ ಮಹಾರುದ್ರಾನುಷ್ಠಾನ, ಗಾಯತ್ರಿ ಯಜ್ಞ, ಮಹಾಪುರುಷ ಪರಿಚರ್ಯಾದಂತಹ ಮಹಾಕಾರ್ಯಗಳನ್ನು ಸೇವಾರೂಪದಿಂದ ಭಗವಂತನಲ್ಲಿ ಸಮರ್ಪಿಸುತ್ತಾ ಬಂದಿದೆ. ಹೊನ್ನಾವರ-ಕುಮಟಾ-ಭಟ್ಕಳ ತಾಲೂಕಿನ ವೈದಿಕರು ಸೇರಿ ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ಮೂಲಕ ಕಳೆದ ಐದಾರು ವರ್ಷದಿಂದ ಹೊನ್ನಾವರ ತಾಲೂಕಿನ ಗುಣವಂತೆ ಶಂಭುಲಿoಗ ದೇವರ ಸನ್ನಿದಾನದಲ್ಲಿ ಈ ಕಾರ್ಯಕ್ರಮವನ್ನು ಧಾರ್ಮಿಕ ವಿಧಿ ವಿಧಾನದಂತೆ ನೆರವೇರುತ್ತಾ ಬರಲಾಗಿದೆ.

ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೋಂದಿಗೆ ಅರ್ಚಕರಾದ ಹರೀಶ ನಾರಾಯಣ ಭಟ್ಟ ನಾಜಗಾರ ಮಾತನಾಡಿ ಇಡಿ ಜಗತ್ತನೆ ದರ್ಮ ಎನ್ನುವುದನ್ನು ಹಿಡಿದಿಟ್ಟುಕೊಂಡಿದೆ, ಪುರಾತನ ಕಾಲದಿಂದಲು ಋಷಿ ಮುನಿಗಳು ಯಜ್ಞದ ಮೂಲಕ ಶ್ರೇಯಸ್ಸನ್ನು ಕಂಡುಕೊoಡಿದ್ದಾರೆ. ಮಳೆ ಬೆಳೆ ಸಸ್ಯ ಭೂ ಸಮ್ರದ್ದಿ ಕಂಡಿದ್ದಾರೆ. ಅದೆ ಪರಂಪರೆಯಲ್ಲಿ ಬಂದoತ ನಾವು ಯಜ್ಞವನ್ನು ಮಾಡಬೇಕು, ದೇಶಕ್ಕೆ ಸಂಮ್ರದ್ದಿ ಉಂಟುಮಾಡಬೇಕು ಎನ್ನುವ ಚಿಂತನೆಯನ್ನಿಟ್ಟುಕೊoಡು ರಾಷ್ಟçದಲ್ಲಿ ಯೋಗ ಕ್ಷೇಮಗಳಾಗ ಬೇಕು ಎನ್ನುವ ಉದ್ದೇಶದಿಂದ ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ಮೂಲಕ ಕಳೆದ ಆರೇಳು ವರ್ಷಗಳಿಂದ ಪ್ರತಿ ವರ್ಷವು ಒಂದೊoದು ಯಾಗ ಮಾಡುತ್ತಾ ಬಂದಿದ್ದೇವೆ ಎಂದು ಮಾಹಿತಿ ನೀಡಿದರು.

ಅರ್ಚಕರಾದ ಮಹಾಬಲೇಶ್ವರ ಭಟ್ಟ ಮಾತನಾಡಿ ನಮ್ಮ ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಮಗ್ರ ನಕ್ಷತ್ರ ಮಹಾಯಜ್ಞವನ್ನು ಇಂದು ಸಮಾಪತ್ತಿ ಗೋಳಿಸಿದ್ದೇವೆ ಈ ಯಜ್ಞದಿಂದ ರಾಷ್ಟçಕ್ಕೆ ಒಳೆಯದಾಗಲಿ ಎನ್ನುವುದು ನಮ್ಮೆಲ್ಲಾ ವೈದಿಕರ ಸಂಕಲ್ಪವಾಗಿದೆ ಎಂದು ಯಜ್ಞದ ಕುರಿತು ವಿವರಿಸಿದರು. ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ಪದಾದಿಕಾರಗಳು ಹೊನ್ನಾವರ-ಕುಮಟಾ ಭಟ್ಕಳ ಭಾಗದ ಅರ್ಚಕರುಗಳು ಇದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Exit mobile version