ಕುಮಟಾ: ಇದೇ ಆಗಸ್ಟ್ 13ರ ರವಿವಾರ ಬೆಳಿಗ್ಗೆ 8.30 ರಿಂದ ಚಿತ್ರಿಗಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಉಚಿತ ಆಯುರ್ವೇದ ಸಂವಾದ ಮತ್ತು ಔಷಧ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ತಜ್ಞರಾದ ಡಾ. ಎಂ. ಎಸ್. ಅವಧಾನಿ, ಡಾ. ಗಿರೀಶ್ ನಾಯ್ಕ, ಡಾ. ರಾಘವೇಂದ್ರ ನಾಯ್ಕ, ಡಾ. ವಾಹಿನಿ ಆರ್. ನಾಯ್ಕ, ಡಾ. ಎಸ್. ಪ್ರಸನ್ನ, ಡಾ. ಸಹನಾ ಹೆಗಡೆ ಸಂವಾದ ಹಾಗೂ ತಪಾಸಣೆ ನಡೆಸಿಕೊಡಲಿದ್ದಾರೆ. ಇತ್ತಿಚೆಗೆ ಸಂದುನೋವು, ನರಸಂಬAಧೀ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕುರಿತು ತಜ್ಞ ವೈದ್ಯರ ಜೊತೆ ಸಂವಾದಿಸಲು ಅವಕಾಶವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿಬಿರದ ಗೌರವಾಧ್ಯಕ್ಷರಾದ ಸುರೇಶ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವೇಶ ಪಡೆಯಲು 9620854779, 9448723052, 9964197319 ಸಂಪರ್ಕಿಸಬಹುದಾಗಿದೆ.
ವಿಸ್ಮಯ ನ್ಯೂಸ್, ಕುಮಟಾ