ಚಂದ್ರಯಾನ ಭಾರತದ ಕೀತಿಯನ್ನು ಹೆಚ್ಚಿಸಿದ್ದು, ಅಂತರಾಷ್ಟ್ರೀಯ ಸಮುದಾಯ ಅಚ್ಚರಿಯಿಂದ ನೋಡುವಂತೆ ಮಾಡಿದೆ. ಚಂದ್ರನಲ್ಲಿ ಯಶಸ್ವಿಯಾ ಇಳಿದ ಚಂದ್ರಯಾನ-3 ( Chandrayaan 3 ) ಲ್ಯಾಂಡರ್ ವಿಕ್ರಮ್, ಚಂದ್ರನ ಮೇಲ್ಮೈ ಪ್ರದೇಶದಲ್ಲಿ ಅಧ್ಯಯನ ಆರಂಭಿಸಿದೆ. ಲ್ಯಾಂಡರ್ ಚಂದ್ರನ ಮೇಲ್ಮೆಯಲ್ಲಿ ಇಳಿಯುತ್ತಿದ್ದಂತೆಯೇ ಲ್ಯಾಂಡಿಂಗ್ ಪ್ರದೇಶದ ಫೋಟೋವನ್ನು ಸೆರೆ ಹಿಡಿದಿದೆ. ಲ್ಯಾಂಡರ್ ನ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಇಸ್ರೋ ಇದನ್ನು ಹಂಚಿಕೊಂಡಿದ್ದು, ಲ್ಯಾಂಡರಿನ ಕಾಲುಗಳು ಈ ಫೋಟೋದಲ್ಲಿ ಸೆರೆಯಾಗಿದ್ದು, ಲ್ಯಾಂಡರ್ ನ ನೆರಳಿನ ಚಿತ್ರವೂ ಕಾಣುತ್ತಿದೆ.
ಇದೇ ವೇಳೆ, ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯವ ವೇಳೆ ಲ್ಯಾಂಡರ್ ತೆಗೆದಿರುವ ಚಿತ್ರಗಳು ಗಮನಸೆಳೆಯುತ್ತಿವೆ. ಲ್ಯಾಂಡರ್ ಒಳಗಿದ್ದ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ, ತೆಗೆದಿರುವ 4 ಚಿತ್ರಗಳು ಇಸ್ರೊ ಪ್ರಕಟಿಸಿದೆ. ಚಂದ್ರನ ಮೇಲ್ಮೈ ಮೇಲೆ ಕುಳಿಗಳು ಇರುವುದನ್ನು ಇಲ್ಲಿ ಕಾಣಬಹುದಾಗಿದೆ.
Chandrayaan 3 : ಮುಂದಿನ ಪ್ರಕ್ರಿಯೆ ಏನು?
ಚಂದ್ರನ ನೆಲದಲ್ಲಿ ಇರಬಹುದಾದ ತೇವಾಂಶದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗಿದೆ ರೋವರ್. ಇಲ್ಲಿನ ಕಠಿಣ ಎನಿಸಿಕೊಂಡ ದಕ್ಷಿಣ ಧ್ರುವದ ನೆಲದ ಕಣಗಳಲ್ಲಿ ಯಾವೆಲ್ಲಾ ಅಂಶಗಳಿವೆ. ಆ ಮಣ್ಣಿನಲ್ಲಿರುವ ರಾಸಾಯನಿಕ ಅಂಶಗಳೇನು? ಮಣ್ಣಿನಲ್ಲಿರುವ ಕ್ಯಾಲ್ಸಿಯಂ, ಸಿಲಿಕಾನ್, ಮೆಗ್ನೇಷಿಯಂ, ಪೊಟ್ಯಾಷಿಯಂ ಹಾಗೂ ಕಬ್ಬಿಣ ಅಂಶಗಳನ್ನು ಪತ್ತೆ ಮಾಡಲಿದ್ದು, ಇದನ್ನು ಇಸ್ರೋಗೆ ಕಳುಹಿಸಲಿದೆ. ಭೂಮಿಯ ಹವಾಮಾನಕ್ಕೂ ಚಂದ್ರನ ಹವಾಮಾನಕ್ಕೂ ಸಾಕಷ್ಟು ವೆತ್ಯಾಸಗಳಿದ್ದು, ಚಂದ್ರನಲ್ಲಿರುವ ಹವಾಮಾನವನ್ನೂ ಸೂಕ್ಷ್ಮವಾಗಿ ಪರೀಕ್ಷೆ ಮಾಡಲಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್