Follow Us On

WhatsApp Group
Info
Trending

ಪ್ರತಿಷ್ಠಿತ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕೀರ್ಣ

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರ ಮತ್ತು ಗಣಕಶಾಸ್ತ್ರ ವಿಭಾಗವು 11 ಅಗಸ್ಟ್ 2020 ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಆಯೋಜಿಸಿತ್ತು. ಮ್ಯೂಚುವಲ್ ಅರ್ಥೋಗೊನಲ್ ಲ್ಯಾಟಿನ್ ಮತ್ತು ಮಷಿನ್ ಲರ್ನಿಂಗ್ ಫಾರ್ ಕಂಪ್ಯೂಟರ ವಿಸನ್ ಈ ಎರಡು ವಿಷಯಗಳ ಮೇಲೆ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಸುಮಾರು 350 ಕ್ಕೂ ಹೆಚ್ಚು ಆಸಕ್ತರು ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದರು. ತಮಿಳುನಾಡಿನ ಎ.ವಿ.ವಿ.ಎಮ್ ಶ್ರೀಪುಷ್ಪಂ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ.ಆರ್.ಸಂಗೀತಾ ರವರು ಪ್ರಸಿದ್ದ ಗಣಿತಶಾಸ್ತ್ರಜ್ಞರಾದಯೂಲರ ರವರ ಕಲ್ಪನೆಯಂತೆ ಲ್ಯಾಟಿನ ಅಕ್ಷರಗಳನ್ನು ಪರಸ್ಪರ ಲಂಬಕೋನದ ಚೌಕದಲ್ಲಿ ಹೇಗೆ ಅಳವಡಿಸಬಹುದು ಮತ್ತು ಅದರ ಪ್ರಮುಖವಾದ ಸರಣಿಗಳನ್ನು ಹೇಗೆ ಚೌಕದಲ್ಲಿ ವಿಸ್ತರಿಸಬಹುದು ಎನ್ನುವುದನ್ನು ತಿಳಿಸಿದರು. ಲ್ಯಾಟಿನ್ ಚೌಕದಿಂದ ಪಡೆಯಬಹುದಾದ ಉಪಯೋಗಳ ಬಗ್ಗೆ ಮಾಹಿತಿಯನ್ನು ನೀಡಿದರು, ಹಾಗೂ ಆನಲೈನ್ ಮುಖಾಂತರ ಭಾಗವಹಿಸಿದವರ ಸಮಸ್ಯೆಗಳಿಗೆ ಸೂಕ್ತವಾದ ಉತ್ತರವನ್ನು ಸಮರ್ಪಕವಾಗಿ ನೀಡಿದರು.

ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿರುವಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಪ್ರೊಪೆಸರ ಶಾರದಾ ಭಟ್ಟ ರವರು ಸದ್ಯದ ಪರಿಸ್ಥಿತಿಯಲ್ಲಿ ಕಂಪ್ಯೂಟರ ವಿಸನ್ ಮತ್ತು ಇಮೇಜ್ ಪ್ರೊಸೆಸಿಂಗ್ ಕ್ಷೇತ್ರದಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಜೊತೆಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಂಶೋಧನಾ ವಿಷಯವನ್ನು ಆರಿಸಿಕೊಳ್ಳಬೇಕೆಂದು ಹೇಳಿದರು. ಕಂಪ್ಯೂಟರ್ ಸೈನ್ಸ್‍ನಲ್ಲಿ ಯಾವ ಬ್ಯ್ರಾಂಚ್‍ಗಳಲ್ಲಿ ಕಂಪ್ಯೂಟರ ವಿಸನ್ ಉಪಯೋಗವಾಗುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ಹೇಗೆ ಇದರ ಬಳಕೆಯಾಗುತ್ತದೆ ಎಂದು ರೊಬೊಟಕ್ಸ, ಗ್ಯಾಮಿಂಗ್ ಹಾಗೂ ಬಯೋಮೆಟ್ರಿಕ್ಸ ಟೂಲ್ಸಗಳ ಉದಾಹರಣೆಯೊಂದಿಗೆ ವಿವರಿಸಿದರು. ಅಲ್ಲದೇ ಕಂಪ್ಯೂಟರ ವಿಸನನಲ್ಲಿ ಮಾಷನ ಲರ್ನಿಂಗ ಪಾತ್ರವನ್ನು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್.ಶೆಟ್ಟಿಯವರು ಈ ಸಂಕೀರ್ಣವನ್ನು ಆಯೋಜಿಸಿದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾ ಸಂಕೀರ್ಣ ಯಶಸ್ವಿಯಾಗಿ ಸಂಪನ್ನಗೊಳ್ಳಲಿ ಎಂದು ಹಾರೈಸಿದರು.


ಗಣಿತಶಾಸ್ತ್ರ ಮತ್ತು ಗಣಕಶಾಸ್ತ್ರದ ಮುಖ್ಯಸ್ಥರಾದ ಪ್ರೊಪೆಸರ ವಿದ್ಯಾ ಎನ್ ತಲಗೇರಿಯವರು ತಮ್ಮ ವಿಭಾಗದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಎಲ್ಲಾ ಪ್ರಾದ್ಯಾಪಕರನ್ನು ನೆನಪಿಸಿಕೊಳ್ಳತ್ತಾ ವಿಶ್ವವಿದ್ಯಾಲಯ ಮಟ್ಟದಲ್ಲಿ ರ್ಯಾಂಕ ವಿಜೇತರಾದ, ಬಂಗಾರದ ಪದಕ ಪಡೆದ ಮತ್ತು ವಿಚಾರ ಸಂಕೀರ್ಣಗಳಲ್ಲಿ ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇಂದು ನಡೆಯುವ ಈ ವಿಚಾರ ಸಂಕೀರ್ಣದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಆರ್ ಸಂಗೀತಾರವರನ್ನು ಪ್ರೊಪೆಸರ ರಚನಾ ವಿ. ನಾಯಕರವರು ಮತ್ತು ಪ್ರೊಪೆಸರ. ಶಾರದಾ ಭಟ್ಟರವರನ್ನು ಪ್ರೊಪೆಸರ ಚೇತನ ನಾಯ್ಕರವರು ಪರಿಚಯಿಸಿದರು. ಪ್ರೊಪೆಸರ ಗಣೇಶ ನಾಯ್ಕರವರು ತಾಂತ್ರಿಕ ವ್ಯವಸ್ಥೆಗೆ ಸಹಕಾರ ನೀಡಿದರು. ಹಾಗೂ ಪ್ರೊಪೆಸರ ಗಿರೀಶ ಹೆಗಡೆ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.

ಕೆನರಾ ಕಾಲೇಜು ಸೊಸೈಟಿಯ ಅಧ್ಯಕ್ಷರಾದ ಶ್ರೀ ರಘು ಪಿಕಳೆ, ಚೆರಮನ ಶ್ರೀ ಎಂ. ವಾಯ್. ಪ್ರಭು, ಕಾರ್ಯದರ್ಶಿಗಳಾದ ಶ್ರೀ ವಿನೋದ ಪ್ರಭು ಮತ್ತು ಸಮಸ್ತ ಆಡಳಿತ ಮಂಡಳಿಯವರು ಕಾರ್ಯಕ್ರಮ ಆಯೋಜನೆಗೆ ಸಂಪೂರ್ಣ ಸಹಕಾರ ನೀಡಿ ಅಭಿನಂದಿಸಿದರು.

Back to top button