ಭಟ್ಕಳ: ರಾಜ್ಯ ಮೀನುಗಾರಿಕೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯುತಾಲೂಕಾ ಪಂಚಾಯತ ಸಭಾಗ್ರಹದಲ್ಲಿ ನಡೆಯಿತು. ಸಭೆಯಲ್ಲಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎಮ್. ಎಮ್. ಬಿಳಗಿ ಅವರ ನೇಮಕದ ಬಳಿಕ ಇರುವ ಸಿಬ್ಬಂದಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಈ ವಿಚಾರವಾಗಿ ಸಚಿವರು ನಿರ್ದೇಶಕರಲ್ಲಿ ಪ್ರಶ್ನಿಸಿದಕ್ಕೆ ನಾನು ಸರ್ಕಾರದ ಮಾರ್ಗಸೂಚಿ ಯಂತೆ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಅಪಪ್ರಚಾರ ಮಾಡಿದ್ದಾರೆ. ನನ್ನ ಶಿಸ್ತು , ರೀತಿ ಕೆಲಸ ಉಳಿದ ಸಿಬ್ಬಂದಿಗಳಿಗೆ ಸಮಸ್ಯೆ ಆಗಿದ್ದಕ್ಕೆ ಅವರು ವರ್ಗಾವಣೆ ಮಾಡಿಸಿಕೊಂಡು ಹೋಗಿರಬಹುದು ಎಂಬ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ಅವರು ಕಚೇರಿಯಲ್ಲಿನ ಮಹಿಳಾ ಸಿಬ್ಬಂದಿಗಳಿಗೆ ನೀವು ಕಿರುಕುಳ ನೀಡುತ್ತಿರುವ ವಿಚಾರದಲ್ಲಿ ಪತ್ರ ಬರೆದು ನನಗೆ ದೂರಲಾಗಿದ್ದು, ನಿಮ್ಮ ವಿರುದ್ದ ಎಲ್ಲಾ ಸಾಕ್ಷಿ ನನ್ನಬಳಿ ಇದೆ ಇದನ್ನು ಸಭೆಯಲ್ಲಿ ಬಯಲು ಮಾಡಬೇಕಾಗುತ್ತದೆ ಎಂದರು.
ಈ ವೇಳೆ ಸಚಿವ ಮಂಕಾಳ ಅವರ ಜೊತೆಗೆ ನಿರ್ದೇಶಕ ಅಧಿಕಾರಿ ಮಾತಿಗಿಳಿದಿದರು. ನಂತರ ಅಧಿಕಾರಿಯ ವರ್ತನೆಯ ವಿರುದ್ದ ಸಭೆಯಲ್ಲಿ ಠರಾವು ತೆಗೆಯುವಂತೆ ಸಚಿವರು ಸೂಚಿಸಿದರು. 10 ಚಾಲಕ ನಿರ್ವಾಹಕರ ಕೊರತೆ ಇರುವ ಬಗ್ಗೆ ಡಿಪ್ಪೋ ಮ್ಯಾನೇಜರ್ ಸಚಿವ ರಲ್ಲಿ ಪ್ರಸ್ತಾಪಿಸಿದ್ದು ಇದಕ್ಕೆ ಸಚಿವರು 2017-18 ರಲ್ಲಿ ಈ ಮೊದಲಿನಂತೆ ಬಸ್ ಸಂಚಾರದ ಶೆಡ್ಯುಲ್ ಮತ್ತೆ ಆರಂಭ ಆಗಬೇಕು. ಮುಂಡಳ್ಳಿ ಅಳ್ವೇಕೋಡಿ ಬಸ್ ಸಂಚಾರ ಮತ್ತೆ ನಡೆಯಬೇಕು. ಮಹಿಳೆಯರಿಗೆ ಉಚಿತ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿ ಕರೆ ಮಾಡುತ್ತಿದ್ದಾರೆ. ಬಸ್ ಬೇಕಿದ್ದರೆ ತಿಳಿಸಿ ಎಂದರು. ಈ ಸಂಧರ್ಭದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ಎನ್., ತಹಸೀಲ್ದಾರ ತಿಪ್ಪೇಸ್ವಾಮಿ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ನಮನೆ ಮುಂತಾದವರು ಇದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ