Follow Us On

WhatsApp Group
Important
Trending

ಭಟ್ಕಳದ ಸೂಕ್ಷ್ಮಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆಗೆ ಆಗ್ರಹ: ಮನವಿ ಸಲ್ಲಿಕೆ

ಭಟ್ಕಳ: ನಗರ ಭಾಗದ ಮುಖ್ಯ ಸರ್ಕಲ್‌ನಿಂದ ಮುಖ್ಯ ರಸ್ತೆ ಹೂವಿನ ಚೌಕದವರೆಗೆ ಸಿಸಿ ಕ್ಯಾಮರ ಕಾರ್ಯನಿರ್ವಹಿಸದ ಕುರಿತು ಮತ್ತು ತಾಲೂಕಿನ ಖಾಸಗಿ ಶಾಲಾ ವಾಹನಗಳ ಮಿತಿ ಮೀರಿದ ವೇಗ ನಿಯಂತ್ರಣಕ್ಕೆ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಕ್ರಿಯಾಶೀಲ ಗೆಳೆಯರ ಬಳಗದಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯತು.

ಭಟ್ಕಳ ನಗರ ಭಾಗದ ಸೂಕ್ಷ್ಮತೆಯನ್ನು ಅರಿತು ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಭಟ್ಕಳದ ಮುಖ್ಯ ಸರ್ಕಲ್‌ನಿಂದ ಮೇನ್ ರಸ್ತೆ ಹೂವಿನ ಚೌಕದವರೆಗೆ ಭಟ್ಕಳ ಮರಸಭೆಯ ವತಿಯಿಂದ ಕಳೆದ ಹಲವು ವರ್ಷಗಳಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು ಹಾಗೂ ಅದರ ಡೇಟಾ ಮೊನಿಟರಿಂಗ್ ಭಟ್ಕಳ ಪೊಲೀಸ್ ಇಲಾಖೆ ಮಾಡುತ್ತಾ ಬಂದಿತ್ತು. ಆದರೆ ಕೆಲ ವರ್ಷದಿಂದ ಯಾವುದೇ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸದಿರುವುದು ಪುರಸಭೆಗೆ ಮಾಹಿತಿ ಇದ್ದರೂ ಸಹ ಅದನ್ನು ಸರಿಪಡಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿದೆ.

ಬಾಕಿ ಯಾವುದೇ ಕಾಮಗಾರಿ ಕೆಲಸವಿದ್ದರೂ ಪುರಸಭೆ ಕೂಡಲೆ ಟೆಂಡರ್ ಕರೆದು, ಕೆಲಸ ಮಾಡಿ ಮುಗಿಸುವ ಪುರಸಭೆಯವರು ಇದನ್ನು ಏಕೆ ಮಾಡಿಲ್ಲ. ಈಗಾಗಲೇ ಪೊಲೀಸ್ ಇಲಾಖೆಯು ಸಹ ಹಲವಾರು ಬಾರಿ ಪುರಸಭೆಗೆ ಪತ್ರ ಬರೆದಿದ್ದೂ, ಪುರಸಭೆಯ ಮಾಸಿಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಸಿಸಿ ಕ್ಯಾಮರಾ ಸರಿಪಡಿಸಲು ಠರಾವಾಗಿದ್ದರೂ ಸಹ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಈ ರೀತಿ ನಿರ್ಲಕ್ಷ್ಯ ತೋರುತ್ತಿರುವುದು ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಸಹಾಯಕ ಆಯುಕ್ತರು ಈ ವಿಷಯದ ಸೂಕ್ಷ್ಮತೆಯನ್ನು ಅವಲೋಕಿಸಿ ಗಂಭೀರವಾಗಿ ಪರಿಗಣಿಸಿ ಪೋಲಿಸ್ ಇಲಾಖೆ ಹಾಗೂ ಪುರಸಭೆ ಮುಖ್ಯಾಧಿಕಾರಿಯವರ ಜೊತೆ ಸೂಕ್ತ ಚರ್ಚೆ ನಡೆಸಿ ಅತೀ ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇನ್ನು ತಾಲೂಕಿನ ಕೆಲವು ಖಾಸಗಿ ಶಾಲಾ ವಾಹನಗಳ ಚಾಲಕರು, ಮಿತಿ ಮೀರಿದ ವೇಗದಲ್ಲಿ ಶಾಲಾ ವಾಹನಗಳನ್ನು ಚಲಾಯಿಸುತ್ತಿದ್ದು, ಇಕ್ಕಟ್ಟಿನ ರಸ್ತೆಗಳಲ್ಲಿಯೂ ಸಹ ಅತಿ ವೇಗವಾಗಿ ವಾಹನ ಚಲಾಯಿಸಿ ಸಾರ್ವಜನಿಕರಿಗೆ ಆತಂಕ ಸೃಷ್ಟಿಸಿದ್ದಾರೆ. ಅಲ್ಲದೇ, ಇದರಲ್ಲಿ ಕೆಲವು ಶಾಲಾ ವಾಹನಗಳನ್ನು ತಪ್ಪು ಮಾರ್ಗದ ರಸ್ತೆಯಲ್ಲಿಯೂ ಸಹ ಚಲಾಯಿಸುತ್ತಿರುವುದು ಕಂಡುಬoದಿರುತ್ತದೆ. ಈ ಹಿನ್ನೆಲೆ ಸಂಬoಧಿಸಿದ ಶಾಲಾ ಕಾಲೇಜುಗಳಿಗೆ ಸೂಕ್ತ ನಿರ್ದೇಶನ ನೀಡುವುದರ ಜೊತೆಗೆ ಎಲ್ಲಾ ಶಾಲಾ ವಾಹನಗಳಿಗೆ ಕಡ್ಡಾಯವಾಗಿ ವೇಗ ನಿಯಂತ್ರಕ ಅಳವಡಿಸಲು ಸೂಚಿಸಬೇಕಾಗಿ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತನ ಜಿಲ್ಲಾ ಪ್ರಮುಖರಾದ ಶಂಕರ ಶೆಟ್ಟಿ, ರಾಮನಾಥ ಬಳಗಾರ, ಹಾಗೂ ಕ್ರಿಯಾಶೀಲ ಗೆಳೆಯರ ಬಳಗದ ದೀಪಕ ನಾಯ್ಕ, ಶ್ರೀಕಾಂತ ನಾಯ್ಕ, ಪಾಂಡುರoಗ ನಾಯ್ಕ, ಭವಾನಿ ಶಂಕರ ನಾಯ್ಕ, ಶ್ರೀನಿವಾಸ ನಾಯ್ಕ, ಅರುಣ ನಾಯ್ಕ, ರಮೇಶ ಖಾರ್ವಿ ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button