Big News
Trending

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮೂಲಕ ಗುರುತಿಸಿಕೊಂಡ ಶ್ರೀರಾಮ್ ಸ್ಟಡಿ ಸರ್ಕಲ್

10 ವರ್ಷಗಳ ಸಾರ್ಥಕ ಸಾಧನೆ ಮಾಡಿದ ನಾಡಿನ ಹೆಸರಾಂತ ತರಬೇತು ಕೇಂದ್ರ
ವರ್ಷ 1 ರಲ್ಲಿಯೇ 600ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ವಿವಿಧ ಉದ್ಯೋಗ ಹಾಗೂ ಹುದ್ದೆ

[sliders_pack id=”3491″]

ಅಂಕೋಲಾ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವ ಜನತೆಯನ್ನು ಪ್ರೇರೇಪಿಸಿ, ಸೂಕ್ತ ತರಬೇತಿ ನೀಡಿ, ಅಭ್ಯರ್ಥಿಗಳ ಜೀವನದ ಯಶಸ್ಸಿನ ಹಿಂದೆ ಮೆಟ್ಟಿಲಾಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಶ್ರೀರಾಮ್ ಸ್ಟಡಿ ಸರ್ಕಲ್ ಸಾರ್ಥಕ 10ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ.

ಕಳೆದ 10ವರ್ಷಗಳಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿಯೂ, ಯುಪಿಎಸ್.ಸಿ, ಕೆ.ಎ.ಎಸ್, ಪೋಲೀಸ್, ಬ್ಯಾಂಕ್, ಎಫ್.ಡಿ.ಎ, ಎಸ್.ಡಿ.ಎ, ರೈಲ್ವೆ ಮತ್ತಿತರ ಎಲ್ಲಾ ಸ್ಥರದ ಪರೀಕ್ಷೆಗಳನ್ನು ಎದುರಿಸಿದ ಶ್ರೀರಾಮ್ ಸ್ಟಡಿ ಸರ್ಕಲ್‌ನ ನಾನಾ ವಿದ್ಯಾರ್ಥಿಗಳು ಒಟ್ಟಾರೆಯಾಗಿ ಒಂದೇ ವರ್ಷದಲ್ಲಿ 600ಕ್ಕೂ ಹೆಚ್ಚು ಹುದ್ದೆ ಹಾಗೂ ನೌಕರಿ ಗಳಿಸಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಇತ್ತೀಚೆಗೆ ಕೆ.ಎ.ಎಸ್-ಸಿ.ಟಿ.ಓ ಪರೀಕ್ಷೆಯಲ್ಲಿ ವಂದಿಗೆಯ ಸೌಜನ್ಯ ಬೊಮ್ಮಯ್ಯ ನಾಯಕ 24ನೇ ರ‍್ಯಾಂಕ್ ಗಳಿಸಿ ಗಮನ ಸೆಳೆದಿದ್ದರೆ, ಅಂಕೋಲಾದ ಇನ್ನೊರ್ವ ಹೆಮ್ಮೆಯ ಕುವರಿ ಹೇಮಾ ಶಾಂತಾರಾಮ ನಾಯಕ ಯುಪಿಎಸ್.ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಇವರೀರ್ವರು ಶ್ರೀರಾಮ್ ಸ್ಟಡಿ ಸರ್ಕಲ್‌ನ ವಿದ್ಯಾರ್ಥಿಗಳೆನ್ನುವುದು ಗಮನಾರ್ಹ ಸಂಗತಿಯಾಗಿದೆ. ನಿಶಾದ ಮತ್ತು ಇಬ್ಬರು ಬ್ಯಾಂಕ್ ಆಫ್ ಬರೊಡಾಗೆ ಆಯ್ಕೆಯಾಗಿದ್ದು, ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇವರಂತೆ ಈ ಹಿಂದಿನ 10ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ 400ಕ್ಕೂ ಹೆಚ್ಚು ಸರಾಸರಿ ಲೆಕ್ಕದಲ್ಲಿ ರಾಜ್ಯದ ನಾನಾ ಇಲಾಖೆ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಂಸ್ಥೆಯಿAದ ತರಬೇತುಗೊಂಡ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ. ಅಲ್ಲದೇ ಇವರೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇವಲ ಒಂದು ಪರೀಕ್ಷೆಯನ್ನಷ್ಟೇ ಪಾಸು ಮಾಡದೆ, ಒಂದೇ ಬಾರಿಗೆ 2ರಿಂದ ನಾಲ್ಕೆöÊದು ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಹುಬ್ಬೆರಿಸುವ ಸಾಧನೆ ಮಾಡಿದ್ದಾರೆ.

ರಾಜ್ಯದ ನಾನಾ ಭಾಗಗಳಿಂದ ಹೆಸರಾಂತ ಭೋಧಕರನ್ನು ಕರೆಸಿ ಅಂಕೋಲಾ ಮತ್ತು ಕುಮಟಾದ ಕೇಂದ್ರಗಳಲ್ಲಿ ತರಬೇತು ನೀಡಲಾಗುತ್ತಿದೆ. ಬೇಡಿಕೆಗನುಗುಣವಾಗಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ನೀಡಿ, ಆರ್ಥಿಕ ಹೊರೆಯು ಅವರ ಭವಿಷ್ಯಕ್ಕೆ ತಡೆಯಾಗದಂತೆ ಸಂಸ್ಥೆಯ ಮುಖ್ಯಸ್ಥ ಸೂರಜ ಅರವಿಂದ ನಾಯಕ ಬಾಸಗೋಡ ನಾನಾ ರೀತಿಯ ಸಹಾಯ ಸಹಕಾರ ಮತ್ತು ಮಾರ್ಗದರ್ಶನ ನೀಡಿ ನೆರವಾಗುತ್ತಿದ್ದಾರೆ.

ಶ್ರೀರಾಮ್ ಸ್ಟಡಿ ಸರ್ಕಲ್ ಇನ್ನಷ್ಟು ಎತ್ತರಕೆ ಬೆಳೆದು ಜಿಲ್ಲೆಯ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯದ ಬುನಾದಿಯಾಗಲಿ ಎಂಬುದು ಸಂಸ್ಥೆಯ ಹಿತೈಶಿಗಳ ಮತ್ತು ಶಿಕ್ಷಣ ಪ್ರೇಮಿಗಳ ಹಾರೈಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button