ಕಾರವಾರ: ಅರಣ್ಯ ಮಹಾವಿದ್ಯಾಲಯ, ಶಿರಸಿ ಗ್ರಂಥಾಲಯಕ್ಕೆ ಪೂರಕ ಸೌಲಭ್ಯ ಒದಗಿಸುವ ಉದ್ದೇಶದಿಂದ 2023-24 ಸಾವಲಿಗೆ ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿ ( Job Opportunities) ಮಾಡಿಕೊಳ್ಳಲು ಆಸಕ್ತ, ಅರ್ಹ ಅಭ್ಯಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 1 ಲೈಬ್ರರಿ ಅಸಿಸ್ಟೆಂಟ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೆಪ್ಟೆಂಬರ್ 5 ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಮಾಸಿಕ ವೇತನ 14 ಸಾವಿರ ಇರಲಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಿರಸಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.. ಸೆಪ್ಟೆಂಬರ್ 21, 2023 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ನಡೆಯಲಿದ್ದು, ಆಸಕ್ತರು ಅಗತ್ಯ ದಾಖಲೆಗಳೊಂದಿಗೆ, ಅರ್ಜಿ ನಮೂನೆಯ ಎರಡು ನಮೂನೆಗಳೊಂದಿಗೆ ಬಂದು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಕಡ್ಡಾಯವಾಗಿ ಲೈಬ್ರರಿ & ಇನ್ಫರ್ಮೇಶನ್ ಸೈನ್ಸ್ನಲ್ಲಿ ಪದವಿ & ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆ | ಗ್ರಂಥಾಲಯ ಸಹಾಯಕ |
ವೇತನ | 14 ಸಾವಿರ |
ಉದ್ಯೋಗ ಸ್ಥಳ | ಶಿರಸಿ |
ಸಂದರ್ಶನ ನಡೆಯುವ ದಿನಾಂಕ | ಸೆಪ್ಟೆಂಬರ್ 21, 2023 ರಂದು ಬೆಳಗ್ಗೆ 11 ಗಂಟೆ |
ಸoದರ್ಶನ ನಡೆಯುವ ಸ್ಥಳ
ಡೀನ್ ಅರಣ್ಯ ಮಹಾವಿದ್ಯಾಲಯ
ಶಿರಸಿ, ಉತ್ತರ ಕನ್ನಡ 581401
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ವಿಸ್ಮಯ ನ್ಯೂಸ್, ಶಿರಸಿ