ಕಾರವಾರ : ಉತ್ತರ ಕನ್ನಡ ಜಿಲ್ಲೆ ಯಲ್ಲಿ ಬಹುತೇಕ ಕಡೆ ಸೆಪ್ಟೆಂಬರ್ 19 ರಂದು ಮಂಗಳವಾರ ಗಣೇಶ ಚತುರ್ಥಿಯ ಆಚರಣೆ ನಡೆಯಲಿರುವುದರಿಂದ ರಾಜ್ಯ ಸರ್ಕಾರ ಸೆಪ್ಟೆಂಬರ್ 18 ರಂದು ಸೋಮವಾರ ದಿನ ನೀಡಿರುವ ಸರ್ಕಾರಿ ರಜೆಯ ಬದಲು ಸೆಪ್ಟೆಂಬರ್ 19 ರಂದು ಮಂಗಳವಾರ ರಜೆ ಘೋಷಣೆ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಮತ್ತು ಸರ್ಕಾರಿ ನೌಕರರ ಸಂಘದ ವತಿಯಿಂದ ಬರೆಯಲಾದ ಪತ್ರವನ್ನು ಉಲ್ಲೇಖಿಸಿ ರಜಾ ದಿನದಲ್ಲಿ ಬದಲಾವಣೆ ಮಾಡುವಂತೆ ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಚಿವಾಲಯದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರು.
ಮನವಿಯನ್ನು ಪುರಸ್ಕರಿಸಿದ ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರದ ಬದಲು ಮಂಗಳವಾರ ಗಣೇಶ ಚತುರ್ಥಿ ಸಂಬಂಧಿಸಿದಂತೆ ಸರ್ಕಾರಿ ರಜಾ ದಿನದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಅಧಿಕೃತ ಆದೇಶ ಹೊರಡಿಸಿ, ಸೆ 19 ರಂದು ಸಾರ್ವತ್ರಿಕ ರಜೆ ಘೋಷಿಸಿದ್ದಾರೆ. ಮತ್ತು ಈ ಹಿಂದೆ ಸೆ. 18 ರಂದು ಘೋಷಿಸಲಾಗಿದ್ದ ರಜೆ ರದ್ದು ಗೋಳಿಸಿ, ಸೋಮವಾರ ಕರ್ತವ್ಯದ ದಿನವೆಂದು ಪರಿಗಣಿಸುವಂತೆ ಸೂಚಿಸಿದ್ದಾರೆ ಪುರಾಣ ಪ್ರಸಿದ್ಧ ಇಡಗುಂಜಿ ಸೇರಿದಂತೆ ಹಲವೆಡೆ ಸೆ. 19 ರಂದೇ ಗಣೇಶ ಚತುರ್ಥಿ ಆಚರಣೆ ನಡೆಯಲಿದೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ