ಅಕ್ರಮವಾಗಿ ಸಾಗವಾನಿ ಸಾಗಾಟ: ಜೆಡಿಎಸ್ ತಾಲೂಕಾಧ್ಯಕ್ಷನ ಬಂಧನ

3 ಲಕ್ಷ ರೂ. ಮೌಲ್ಯದ ಸಾಗವಾನಿ, ಸೀಸಂ ಸಾಗಾಟ
ಆರೋಪಿಗಳ ಬಂಧನ

[sliders_pack id=”1487″]

ಯಲ್ಲಾಪುರ: ಸಾಗವಾನಿ ಹಾಗೂ ಸೀಸಂ ಮರಗಳನ್ನು ಕಡಿದು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೂಕಿನ ಬಿಸಗೋಡ ಶಾಖೆಯ ವಡೆಹುಕ್ಕಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ವಶಪಡಿಸಿಕೊಂಡ ಘಟನೆ ನಡೆದಿದೆ. ಹೌದು, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸೇರಿ ನಾಲ್ವರು ಆರೋಪಿಗಳನ್ನು ಸೀಸ ಮತ್ತು ಸಾಗ್ವಾನಿ ತುಂಡುಗಳನ್ನು ಸಾಗಿಸುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಈ ವೇಳೆ ಸುಮಾರು ೩ ಲಕ್ಷ ಮೌಲ್ಯದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ,


ಬಂಧಿತರನ್ನು ಜೆಡಿಎಸ್ ತಾಲೂಕಾಧ್ಯಕ್ಷ ಹಾಗೂ ಕಾಳಮ್ಮನಗರದ ಪಟ್ಟಣ ಪಂಚಾಯತ ಮಾಜಿ ಸದಸ್ಯ ರವಿಚಂದ್ರ ನಾಯ್ಕ, ತೇಲಂಗಾರದ ಮಂಜುನಾಥ ಮಾಸ್ತಿ ಪಟಗಾರ, ಉದ್ಯಮನಗರದ ಮಂಜುನಾಥ ದೇವಿದಾಸ ಗೌಡ ಹಾಗೂ ಬನವಾಸಿಯ ಮುಂಡಿಗೆಹಳ್ಳಿಯ ಹುಲಿಯಾ ಬೊಮ್ಮು ಗೌಡ ಎಂದು ಗುರುತಿಸಲಾಗಿದೆ. ಮತ್ತರ‍್ವ ಆರೋಪಿ ತಳ್ಳಿಗೇರಿಯ ತಿಮ್ಮಣ್ಣ ಗಣಪತಿ ಗೌಡ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಅರಣ್ಯ ಪ್ರದೇಶದಲ್ಲಿ ಸಾಗವಾನಿ ಹಾಗೂ ಸೀಸಂ ಮರಗಳನ್ನು ಕಡಿದು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ವಾಹನ, ಮರದ ತುಂಡುಗಳ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ದ್ವಿಚಕ್ರ ವಾಹನಗಳು ಹಾಗೂ ಒಂದು ಪಿಕಪ್ ವಶಪಡಿಸಿಕೊಳ್ಳಲಾಗಿದ್ದು, ಸಾಗವಾನಿಯ 21 ಹಾಗೂ ಸೀಸಂನ 11 ತುಂಡುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version