Vishnu HegdeSaturday, August 15, 2020, 7:01 PMLast Updated: Saturday, August 15, 2020, 7:01 PM
[sliders_pack id=”3498″]
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 77 ಕರೊನಾ ಪ್ರಕರಣ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಹಳಿಯಾಳದಲ್ಲಿ 18, ಸಿದ್ದಾಪುರದಲ್ಲಿ 13, ಕಾರವಾರದಲ್ಲಿ 13, ಭಟ್ಕಳದಲ್ಲಿ 12, ಹೊನ್ನಾವರದಲ್ಲಿ 2, ಶಿರಸಿಯಲ್ಲಿ 6, ಯಲ್ಲಾಪುರದಲ್ಲಿ 3, ಮುಂಡಗೋಡಿನಲ್ಲಿ 9, ಹಾಗೂ ಜೋಯಿಡಾದಲ್ಲಿ ಓರ್ವನಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ 42 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದೇ ವೇಳೆ ಭಟ್ಕಳದಲ್ಲಿ ಕರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 30ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 8, ಶಿರಸಿಯಲ್ಲಿ 1, ಕಾರವಾರದಲ್ಲಿ 10 ಅಂಕೋಲಾದಲ್ಲಿ 3, ಕುಮಟಾದಲ್ಲಿ 5, ಸಿದ್ದಾಪುರದಲ್ಲಿ 8, ಯಲ್ಲಾಪುರದಲ್ಲಿ 7 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದು 77 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,220ಕ್ಕೆ ಏರಿಕೆಯಾಗಿದೆ. 919 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.