Big News
Trending

ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆ

ಕುಮಟಾ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಮಟಾದ ಗಾಂಧಿ ಚೌಕದಲ್ಲಿ ಇಂದು 74 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಉಪಸ್ಥಿತರೆಲ್ಲರಿಗೂ ಶುಭಕೋರಲಾಯಿತು ಹಾಗೂ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದವರನ್ನು, ದೇಶರಕ್ಷಣೆಯಲ್ಲಿ ತೊಡಗಿರುವ ಸೈನಿಕರನ್ನು ಮತ್ತು ದೇಶದ ಬೆನ್ನೆಲುಬಾದ ರೈತರನ್ನು, ಕೊರೋನಾ ಹೋರಾಟದಲ್ಲಿ ತೊಡಗಿರುವ ಕೊರೊನಾ ವಾರಿಯರ್ಸ್ಗಳನ್ನು ನೆನೆಯಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿಯರಾದ ಶಾರದಾ ಮೋಹನ್ ಶೆಟ್ಟಿ, ವಿ.ಎಲ್.ನಾಯ್ಕ, ರವಿಕುಮಾರ್ ಶೆಟ್ಟಿ, ಮಧುಸೂದನ್ ಶೇಟ್, ಆರ್ ಹೆಚ್. ನಾಯ್ಕ, ಭುವನ್ ಭಾಗ್ವತ್, ಲಕ್ಷ್ಮೀ ಗೊಂಡ, ಆಶಾ ನಾಯ್ಕ, ಎಂ.ಟಿ.ನಾಯ್ಕ, ಮುಜಾಫರ್ ಸಾಬ್, ಪುರಸಭಾ ಮುಖ್ಯಾಧಿಕಾರಿಗಳು, ದಾಕ್ಷಾಯಿಣಿ ಅರಿಗ, ದೀಪಾ ನಾಯ್ಕ, ವೀಣಾ ನಾಯಕ, ಎರ್ನಾಸ್ ಫರ್ನಾಂಡಿಸ್, ನಾಗರಾಜ್ ನಾಯ್ಕ, ಜಗದೀಶ ಹರಿಕಂತ್ರ ಸೇರಿದಂತೆ ಪೌರಕಾರ್ಮಿಕರು, ಸಾರ್ವಜನಿಕರು ಹಾಜರಿದ್ದರು.

  • ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
  • ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಪ್ರೋತ್ಸಾಹಧನ

ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಸಂಜಯ ದತ್ತಾ ನಾಯ್ಕ ಹಾಗೂ 625 ಕ್ಕೆ 619 ಅಂಕಗಳಿಸುವ ಮೂಲಕ ರಾಜ್ಯಕ್ಕೆ 7ನೇ ಸ್ಥಾನ ಗಳಿಸಿರುವ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಅಕ್ಷಯ್ ಅನಿಲ್ ನಾಯ್ಕ ಇವರನ್ನು ಮಲ್ಲಾಪುರದಲ್ಲಿನ ಅವರ ಸ್ವಗೃಹಕ್ಕೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿಯರಾದ ಶಾರದಾ ಮೋಹನ್ ಶೆಟ್ಟಿಯವರು ಭೇಟಿಯಾಗಿ, ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿಗಳ ಮುಂದಿನ ವಿಧ್ಯಾಭ್ಯಾಸ ಹಾಗೂ ಜೀವನಕ್ಕೆ ಶುಭಹಾರೈಸಿ, ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಪ್ರೋತ್ಸಾಹಧನ ವಿತರಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರು ಹಾಗೂ ದಿ.ಮೋಹನ್ ಕೆ. ಶೆಟ್ಟಿ ಟ್ರಸ್ಟ್ ನ ಉಪಾಧ್ಯಕ್ಷರಾದ ರವಿಕುಮಾರ್ ಎಂ.ಶೆಟ್ಟಿ, ಮುಖಂಡರಾದ ವಿ.ಎಲ್.ನಾಯ್ಕ, ಎಂಟಿ.ನಾಯ್ಕ, ಮುಜಾಫರ್ ಸಾಬ್, ವಿನಾಯಕ ಶೇಟ್, ಜಗದೀಶ್ ಹರಿಕಂತ್ರ, ಆಶಾ ನಾಯ್ಕ, ಗಜಾನನ ನಾಯ್ಕ, ನಿತ್ಯಾನಂದ ನಾಯ್ಕ, ಪವನ ನಾಯ್ಕ, ಉಮೇಶ್ ನಾಯ್ಕ ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ

Back to top button