ನಿಮ್ಮ ಯಾವುದೇ ಕಡತವಿರಲಿ: ಅದನ್ನು ಒಂದೇ ದಿನದಲ್ಲಿ ಬಗೆಹರಿಸಿಕೊಡುವೆ: ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿಯ ಭರವಸೆ

ಶಿರಸಿ: ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಬಹುದೊಡ್ಡದಿದೆ. ಪ್ರತಿಯೊಬ್ಬರೂ ಅವರಿಗೆ ಗೌರವನೀಡ ಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅಕ್ಷಯ ಗಾರ್ಡನ್ ನಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರನ್ನು ಗೌರವಿಸುವ ಮತ್ತು ಅವರಿಗೆ ಸಮಾಜದಲ್ಲಿ ಸರಿಯಾದ ಸ್ಥಾನಮಾನ ನೀಡುವ ಉದ್ದೇಶದಿಂದ 2013ರಲ್ಲಿ ಸರ್ಕಾರಪೌರಕಾರ್ಮಿಕರ ದಿನಾಚರಣೆಯನ್ನು ಆರಂಭಿಸಲಾಯಿತು. ಪೌರಕಾರ್ಮಿಕರ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವನಾಗಿದ್ದರಿಂದ ಅವರ ಸಮಸ್ಯೆ ಗಳನ್ನು ಬಗೆ ಹರಿಸಲು ನನ್ನ ಪ್ರಯತ್ನ ಸಾಗಿದೆ ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ ಪೌರಕಾರ್ಮಿಕರ ಯಾವುದೇ ಕಡತವಿರಲಿ ಅದನ್ನು ಒಂದೇ ದಿನದಲ್ಲಿ ಬಗೆಹರಿಸಿಕೊಡುವದಾಗಿ ಪೌರಕಾರ್ಮಿಕರಿಗೆ ಭರವಸೆ ನೀಡಿದರು. ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರಾಗಬೇಕೆಂದೆನಿಲ್ಲ. ಶಿಕ್ಷಣ ಪಡೆದ ಯಾವ ಸಮೂದಾಯದ ಮಕ್ಕಳೂ ಕೂಡಾ ದೊಡ್ಡ ಮಟ್ಟದ ಹುದ್ದೆಗಳನ್ನು ಅಲಂಕರಿಸುವ ಹಕ್ಕ ನಮ್ಮ ಸಂವಿಧಾನದಲ್ಲಿದೆ ಎಂದು ಹೇಳಿದರು.

ಪೌರಕಾರ್ಮಿಕರಾಗಿ ಉತ್ತಮವಾಗಿ ಸೇವೆ ಮಾಡಿದ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ, ಪೌರಕಾರ್ಮಿಕ ದಿನಾಚರಣೆ ನಿಮಿತ್ತ ಪೌರಕಾರ್ಮಿಕರಿಗೆ ಏರ್ಪಡಿಸಲಾಗಿದ್ದ ಅಟೋಟ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ವಿಸ್ಮಯ ನ್ಯೂಸ್, ಶಿರಸಿ

Exit mobile version