Weather: ಕೈಕೊಟ್ಟ ಮಳೆ: ಉತ್ತರಕನ್ನಡದಲ್ಲಿ ಬೇಸಿಗೆಯ ಉಷ್ಣಾಂಶ ದಾಖಲು: ಜನ ಕಂಗಾಲು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯು ಕೈಕೊಟ್ಟ ಕಾರಣ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಇದರಿಂದಾಗಿ ಜಿಲ್ಲೆಯ ಜನರು ಮಳೆಗಾದಲ್ಲಿಯೂ (Weather) ಬೆವತು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮೊಡದ ವಾತಾವರಣವಿದ್ದರು ಕೂಡ ಮಳೆ ಸುರಿಯುತ್ತಿಲ್ಲ. ಬೇಸಿಗೆಯ ಸಮಯದಲ್ಲಿ ಇರುವಷಷ್ಟು ಉಷ್ಣಾಂಶವು ಮಳೆಗಾದಲ್ಲಿಯೇ ಕಂಡು ಬರುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರದಂದು 32 ಡಿಗ್ರಿ ಸೆಲ್ಸಿಯಸ್ ಉಷ್ಟಾಂಶ ದಾಖಲಾಗಿತ್ತು.

ಮಳೆ ಕೈಕೊಟ್ಟ ಕಾರಣ ಈಗಾಗಲೇ ಸೆಖೆಯ ಅಬ್ಬರಕ್ಕೆ ಜನ ಬೇಸ್ತು ಬೀಳುವಂತಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಶನಿವಾರ ಗರಿಷ್ಠ ತಾಪಾಮಾನ 36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಆಗಿದೆ ಎಂದು ಹೇಳಲಾಗಿದೆ. ಅದೇ ರೀತಿ ಉತ್ತರ ಕನ್ನಡದಲ್ಲೂ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಮೊಡ ಕವಿದ ವಾತಾವರಣ (Weather) ಕಂಡುಬoದರು ಕೂಡ ವಿಪರೀತ ಸೆಖೆಯನ್ನು ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬಹುತೇಕ ಭಾಗಗಳಿಂದ ಮಾನ್ಸೂನ್ ಹಿಂದಕ್ಕೆ ಚಲಿಸುತ್ತಿದೆ. ನೈರುತ್ಯ ಮುಂಗಾರು ಹಂಗಾಮು ಮುಗಿಯುತ್ತಾ ಬಂದರೂ ಮಳೆ ಕೊರತೆ ಮಾತ್ರ ನಿವಾರಣೆಯಾಗಿಲ್ಲ. ಇದರಿಂದಾಗಿ ಕರಾವಳಿಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ವಿಪರೀತ ಸೆಖೆ ಕಂಡು ಬರುತ್ತಿದ್ದು, 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಏರಿಕೆಯಾಗಿದೆ.

ಆಗಸ್ಟ್, ಸೆಪ್ಟೆಂಬರ್ ನಂತೆಯೇ ಅಕ್ಟೋಬರ್‌ನಲ್ಲೂ ಮಳೆ ಕೊರತೆ ಮುಂದುವರೆದಿದೆ. ಈಶಾನ್ಯ ಹಿಂಗಾರಿನ ಆರಂಭವೂ ಆಶಾದಾಯಕವಾಗಿಲ್ಲ. ಜೂನ್‌ನಲ್ಲಿ ಮುಂಗಾರು ದುರ್ಬಲಗೊಂಡOತೆ ಹಿಂಗಾರಿನ ಆರಂಭವೂ ದುರ್ಬಲವಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮುಂಗಾರು ಮಳೆಯ ಅವಧಿ ಮುಗಿಯುತ್ತಿದ್ದು, ಹಿಂಗಾರು ಮಳೆ ಆರಂಭವಾಗುವ ಪರ್ವ ಕಾಲದಲ್ಲಿ ಮಳೆಯಾಗುವ ವಾಡಿಕೆ. ಆದರೂ ವಾಡಿಕೆ ಪ್ರಮಾಣದ ಮಳೆಯಾಗದೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಬ್ಯುರೋ ರಿಪೋರ್ಟ್, ವಿಸ್ಮಯ ನ್ಯೂಸ್.

Exit mobile version