ಜೊಯಿಡಾ;ಸತತ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮುಲಕ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿರುವ ವಿದ್ಯಾರ್ಥಿನಿಯ ಸಾಧನೆ ನಮ್ಮ ಜೊಯಿಡಾ ತಾಲೂಕಿಗೆ ಹೆಮ್ಮೆಯ ವಿಚಾರ.ಇವಳು ಮುಂದಿನ ಶೈಕ್ಷಣಿಕ ಜೀವನದಲ್ಲಿ ಉತ್ತಮ ಸಾಧನೆಯ ಮೂಲಕ ದೇಶಕ್ಕೆ ಕಿರ್ತಿ ತರಲಿ ಅದಕ್ಕೆ ನಮ್ಮ ಸದಾ ಸಹಕಾರ ಇರಲಿದೆ ಎಂದು ಸುಪಾ ಗ್ರೇಟ ವಾರಿಯರ್ ಎಕ್ಸ ಸರ್ವಿಸಮೆನ್ ವೆಲಪೇರ ಅಸೊಶಿಷನ್ ಅದ್ಯಕ್ಷ,ನಿವೃತ್ತ ಸೈನಿಕ ಸಂತೋಷ ಸಾವಂತ ಹೇಳಿದರು.
ಅವರು ತಾಲೂಕಿನ ಗುಂದ ಸರಕಾರಿ ಪ್ರೌಡಶಾಲೆಯಲ್ಲಿ 74 ನೇ ಸ್ವಾತಂತ್ರೋತ್ಸವ ಸಂದರ್ಬದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೇಯಲ್ಲಿ620 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ ಸಾಧನಾ ಹೆಗಡೆ ಇವಳನ್ನು ಸುಪಾ ಗ್ರೇಟ ವಾರಿಯರ್ ಎಕ್ಸ ಸರ್ವಿಸಮೆನ್ ವೆಲಪೇರ ಅಸೊಶಿಷನ್ ವತಿಯಿಂದ ಸನ್ಮಾನಿಸಿ ಮಾತನಾಡುತ್ತಿದ್ದರು.
ನಿವೃತ್ತ ಸೈನಿಕ ನರೇಂದ್ರ ನಾಯಕ ಮಾತನಾಡಿ ಸಾದಿಸುವ ಗುರಿಯೊಂದಿಗೆ ಸತತ ಪ್ರಯತ್ನದ ಮೂಲಕ ಅಧ್ಯಯನ ಮಾಡಿದರೆ ಎಲ್ಲವೂ ಸಾದ್ಯ ಎನ್ನೂವದನ್ನು ಗುಂದ ಪ್ರೌಡಶಾಲೆ ವಿದ್ಯಾರ್ಥಿನಿ ಮಾಡಿ ತೊರಿದ್ದಾಳೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸದಾನಂದ ಉಪಾದ್ಯ ಶಿಕ್ಷಕರ ಕೊರತೆಯ ನಡುವೆಯೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ನಿರಂತರ ಮಾರ್ಗದರ್ಶನದ ಮೂಲಕ ವಿಧ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರೌಢಶಾಲೆಯಲ್ಲಿ ನಿರಂತರ ಶೇ 100 ಸಾಧನೆಯಾಗುತ್ತಿದೆ .ಜೊತೆಗೆ ಈ ವರ್ಷ ವಿಧ್ಯಾರ್ಥಿನಿ ಸಾಧನಾ ಹೆಗಡೆ ಹೆಚ್ಚಿನ ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದಿರುವ ಜಿಲ್ಲೆಯಲ್ಲಿ ಶಾಲೆಯ ಗೌರವ ಹೆಚ್ಚಿದೆ ಎಂದರು.
ವಿಸ್ಮಯ ನ್ಯೂಸ್, ಜೋಯ್ಡಾ