ಭಾರತೀಯ ತೈಲ ನಿಗಮ- ಇಂಡಿಯನ್ ಆಯಲ್ ಕಾರ್ಪೋರೇಷನ್ ನಲ್ಲಿ (IOCL Recruitment 2023) ಒಟ್ಟು 1,720 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 10ನೇ, ಐಟಿಐ, ಪಿಯುಸಿ ಮತ್ತು ಪದವಿ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಹೌದು, ( IOCL Recruitment 2023) ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ನವೆಂಬರ್ 20 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಹಾಗು ಗರಿಷ್ಠ 24 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದೆ.
ಹುದ್ದೆಗಳು | ಸಂಖ್ಯೆ |
ಟ್ರೇಡ್ ಅಪ್ರೆಂಟಿಸ್ – ಅಟೆಂಡೆಂಟ್ ಆಪರೇಟರ್ | 421 |
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್) | 189 |
ಟ್ರೇಡ್ ಅಪ್ರೆಂಟಿಸ್ (Boiler) | 58 |
ಟ್ರೇಡ್ ಅಪ್ರೆಂಟಿಸ್ ( ಕೆಮಿಕಲ್ ) | 345 |
ಟ್ರೇಡ್ ಅಪ್ರೆಂಟಿಸ್ ( ಮ್ಯಾಕಾನಿಕಲ್ ) | 169 |
ಟ್ರೇಡ್ ಅಪ್ರೆಂಟಿಸ್ ( ಎಲೆಕ್ಟ್ರಿಕಲ್ ) | 244 |
ಟ್ರೇಡ್ ಅಪ್ರೆಂಟಿಸ್ (ಅಕೌಂಟೆಂಟ್ ) | 39 |
ಟ್ರೇಡ್ ಅಪ್ರೆಂಟಿಸ್ (ಡಾಟಾ ಎಂಟ್ರಿ ) | 49 |
ಟ್ರೇಡ್ ಅಪ್ರೆಂಟಿಸ್ ( ಡಾಟಾ ಎಂಟ್ರಿ ಆಪರೇಟರ್ ) | 33 |
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ, 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳು ವಯೋಮಿತಿ ಸಡಿಲಿಕೆ ಇರಲಿದೆ. ಲಿಖಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಸರಿಯಾಗಿ ಮಾಹಿತಿಗಳನ್ನು ಓದಿಕೊಂಡು, ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆ | Indian Oil Corporation Limited (IOCL) |
ಒಟ್ಟು ಹುದ್ದೆಗಳು | 1,720 |
ಇಲಾಖೆ | ಸರ್ಕಾರಿ |
ಅರ್ಜಿ ಸಲ್ಲಿಸುವ ವಿಧಾನ | ONLINE |
ಅಧಿಕೃತ ವೆಬ್‌ಸೈಟ್ | https://iocl.com/pages/careers-overview |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ನವೆಂಬರ್ 20, 2023 |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ತೈಲ ನಿಗಮ- ಇಂಡಿಯನ್ ಆಯಲ್ ಕಾರ್ಪೋರೇಷನ್ ನಲ್ಲಿ ನಡೆಯುವ ಒಟ್ಟು 1,720 ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅಕ್ಟೋಬರ್ 21 , 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 27 ರಿಂದ ಅಕ್ಟೋಬರ್ 2ರ ವರೆಗೆ ಅಡ್ಮಿಷನ್ ಕಾರ್ಡಿನ ಡೌನ್‌ಲೋಡ್ ದಿನಾಂಕ, ಡಿಸೆಂಬರ್ 3 ( Tentative ) ಪರೀಕ್ಷಾ ದಿನಾಂಕ, ಡಿಸೆಂಬರ್ 8, 2023 ಪರೀಕ್ಷಾ ಫಲಿತಾಂಶ, ಡಿಸೆಂಬರ್ 13 ರಿಂದ ಡಿಸೆಂಬರ್ 21 , 2023 ದಾಖಲಾತಿಗಳ ಪರಿಶೀಲನೆಯ ದಿನಾಂಕವಾಗಿದೆ.
ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್