Follow Us On

WhatsApp Group
Important
Trending

ಟಿಪ್ಪರ್ ಹಾಯಿಸಿ ವ್ಯಕ್ತಿಯ ಹತ್ಯೆ ಪ್ರಕರಣ: ಆರೋಪಿಯ ಬಂಧನ

ಹೊನ್ನಾವರ: ಟಿಪ್ಪರ್ ಹಾಯಿಸಿ, ವ್ಯಕ್ತಿಯೋರ್ವನನ್ನು ಕೊಂದು, ಇನ್ನಿಬ್ಬರಿಗೆ ಗಾಯಪಡಿಸಿದ ಘಟನೆಗೆ ಸಂಬoಧಿಸಿದoತೆ ಆರೋಪಿ ಹಡಿನಬಾಳದ ವಿನಾಯಕ ಭಟ್ಟನನ್ನು ಹೊನ್ನಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ನಂತರ ಆರೋಪಿ ಕೊಪ್ಪಳದ ಕುಷ್ಟಗಿಯಲ್ಲಿ ತಲೆಮರೆಸಿಕೊಂಡಿದ್ದ. ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಇದೀಗ ವಶಕ್ಕೆ ಪಡೆದಿದ್ದಾರೆ. ಹೊನ್ನಾವರಕ್ಕೆ ಆರೋಪಿಯನ್ನು ಕರೆತರಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.

ಹೌದು, ಹೊನ್ನಾವರ ತಾಲೂಕಿನ ಅರೇಅಂಗಡಿ ಸಮೀಪ ಮಂಗಳವಾರ ರಾತ್ರಿ ಸಮಯದಲ್ಲಿ ಹಣಕಾಸಿನ ವಿಷಯದಲ್ಲಿ ಆದ ಗಲಾಟೆ, ಓರ್ವನ ಜೀವವನ್ನೇ ತೆಗೆತ್ತು. ವಿನಾಯಕ ನಾರಾಯಣ ಭಟ್ ಮತ್ತು ಜನಾರ್ಧನ ಕೇಶವ ನಾಯ್ಕ ಹಣದ ವ್ಯವಹಾರದ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರು. ಇದೇ ವಿಷಯಕ್ಕೆ ದ್ವೇಷದಿಂದ ಅರೇಂಅಗಡಿ ಜನತಾ ಕಾಲೋನಿ ಹತ್ತಿರ ವಿನಾಯಕ ನಾರಾಯಣ ಭಟ್, ಜನಾರ್ದನ ನಾಯ್ಕ ಹಾಗೂ ಸ್ನೇಹಿತರಾದ ವಸಂತ ನಾಯ್ಕ ಇವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದ.

ರಸ್ತೆಯ ಪಕ್ಕದಲ್ಲಿದ ಆಟೋರಿಕ್ಷಾದ ಹತ್ತಿರ ಜನಾರ್ಧನ ಕೇಶವ ನಾಯ್ಕ , ಓಲ್ವಿನ್ ರವಿ ಲೋಬೋ ಮತ್ತು ವಸಂತ ನಾಯ್ಕ ಇವರ ಮೇಲೆ ಟಿಪ್ಪರ್ ಹಾಯಿಸಿದ್ದ. ಇದರಿಂದ ಆಟೋ ಜಖಂ ಆಗಿದ್ದು, ಆಟೋ ಚಾಲಕ ಓಲ್ವೀನ್ ಇವನಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದ. ವಸಂತ ಹಾಗೂ ಜನಾರ್ದನ ಇವರಿಗೆ ಗಂಭೀರ ಗಾಯಗೊಂಡಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button