ತಾಲೂಕಿನ ಜನರಿಗೆ ಕರೊನಾ ಶಾಕ್
ಎಲ್ಲೆಡೆ ಹರಡಿದ ಮಹಾಮಾರಿ ನಂಜು
ಹೊನ್ನಾವರ: ಗಣೇಶ ಚತುರ್ಥಿಯ ಸಂಭ್ರಮದಲ್ಲಿರುವ ತಾಲೂಕಿನ ಜನರಿಗೆ ಕರೊನಾ ಶಾಕ್ ಕೊಟ್ಟಿದೆ. ಭಾನುವಾರ ತಾಲೂಕಿನಾದ್ಯಂತ ಬರೊಬ್ಬರಿ 45 ಕರೊನಾ ಕೇಸ್ ದಾಖಲಾಗಿದೆ. ತಾಲೂಕಿನ ಬಹುತೇಕ ಎಲ್ಲ ಕಡೆ ಕರೊನಾ ವ್ಯಾಪಿಸಿದೆ. ಪಟ್ಟಣ ವ್ಯಾಪ್ತಿಯ ಕಸಬಾ ಗುಂಡಿಬೈಲ್ ನಲ್ಲೇ 17ಕ್ಕಿಂತ ಹೆಚ್ಚಿನ ಪ್ರಕರಣ ದೃಢಪಟ್ಟಿದೆ. ಕಸಬಾಗುಂಡಿಬೈಲ್ ನ 62 ವರ್ಷದ ಪುರುಷ, 53 ವರ್ಷದ ಮಹಿಳೆ, 25 ವರ್ಷದ ಯುವತಿ, 8 ವರ್ಷದ ಬಾಲಕ, 73 ವರ್ಷದ ಮಹಿಳೆ ಸೇರಿದಂತೆ ಈ ಭಾಗದ 17ಕ್ಕಿಂತ ಹೆಚ್ಚು ಜನರಿಗೆ ಕರೊನಾ ಸೋಂಕು ತಗುಲಿದೆ.
ಉಳಿದಂತೆ ಪಾವಿನಕುರ್ವಾದ 36 ವರ್ಷದ ಮಹಿಳೆ, ಸರಳಗಿಯ 60 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಠದಕೇರಿಯಲ್ಲೇ ನಾಲ್ಕು ಕೇಸ್ ದೃಢಪಟ್ಟಿದೆ. 29 ವರ್ಷದ ಮಹಿಳೆ, 27 ವರ್ಷದ ಮಹಿಳೆ, 29 ವರ್ಷದ ಮಹಿಳೆ, 40 ಮತ್ತು 65 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಕೆಕ್ಕಾರಿನ 46 ವರ್ಷದ ಮಹಿಳೆ, ನಗರೆಯ 60 ವರ್ಷದ ಪುರುಷ, ಮೊಳ್ಕೋಡಿನ 30 ವರ್ಷದ ಪುರುಷ, ಎಮ್ಮೆಪೈಲಿನ 72 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ.
ಕಡತೋಕಾ ವ್ಯಾಪ್ತಿಯಲ್ಲೂ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಕಡತೋಕಾದ 27 ವರ್ಷದ ಪುರುಷ, 25 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇಂದು 45 ಕರೊನಾ ಕೇಸ್ ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 343ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568