ಉತ್ತರಕನ್ನಡದಲ್ಲಿ ಇಂದು 96 ಕರೊನಾ ಕೇಸ್

50 ಮಂದಿ ಗುಣಮುಖರಾಗಿ ಬಿಡುಗಡೆ
ಕಾರವಾರದಲ್ಲಿ ಒಂದು ಸಾವು
343 ಸೋಂಕಿತರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ

[sliders_pack id=”3491″]

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 96 ಕರೊನಾ ಪ್ರಕರಣ ಪತ್ತೆಯಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರ 16, ಅಂಕೋಲಾ 4, ಕುಮಟಾ 3, ಹೊನ್ನಾವರ 5, ಭಟ್ಕಳ 17, ಶಿರಸಿ 12, ಯಲ್ಲಾಪುರ 8, ಮುಂಡಗೋಡ 18, ಹಳಿಯಾಳ 7, ಜೋಯ್ಡಾ 6ದಲ್ಲಿ ಆರು ಕೇಸ್ ಕಾಣಿಸಿಕೊಂಡಿದೆ. ಇದೇ ವೇಳೆ, ಇಂದು ವಿವಿಧ ಆಸ್ಪತ್ರೆಯಿಂದ 50 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕಾರವಾರ 17, ಕುಮಟಾ 7, ಹೊನ್ನಾವರ 1, ಮುಂಡಗೋಡ 13, ಹಳಿಯಾಳ 12 ಜನರು ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು 96 ಕರೊನಾ ಪ್ರಕರಣ ದೃಢಪಟ್ಟ ಬೆನ್ನಲ್ಲೆ ಸೋಂಕಿತರ ಸಂಖ್ಯೆ 4,044ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಕಾರವಾರದಲ್ಲಿ ಇಂದು ಒಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. 343 ಜನರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಮಟಾದಲ್ಲಿಂದು ಮೂರು ಕರೊನಾ ಕೇಸ್:

ಕುಮಟಾ: ಕರೊನಾ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಲೇ ಇದ್ದು, ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಇಂದು 3 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕುಮಟಾ ತಾಲೂಕಿನ 9 ವರ್ಷದ ಬಾಲಕ, ಕಲಭಾಗ್‌ನ 43 ವರ್ಷದ ಪುರುಷ, ತೋರ್ಕೆಯ 35 ವರ್ಷದ ಪುರುಷನಲ್ಲಿ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಮೂವರು ಕೂಡ ಈ ಹಿಂದೆ ಸೋಂಕು ತಗುಲಿದ್ದವರ ಪ್ರಥಮಿಕ ಸಂಪರ್ಕಕ್ಕೆ ಬಂದವರು ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version