ಶಿರಸಿ: ರಾಜ್ಯದ ಶಕ್ತಿಪೀಠಗಳಲ್ಲಿ ಒಂದಾದ ಪ್ರಸಿದ್ಧ ಶಿರಸಿ ಮಾರಿಕಾಂಬಾ ರಥೋತ್ಸವಕ್ಕೆ ( Sirsi Jatre Live) ಧಾರ್ಮಿಕ ವಿಧಿ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ಮುಂಜಾನೆ ಮಾರಿಕಾಂಬಾ ದೇವಸ್ಥಾನ ಮುಂಭಾಗದಲ್ಲಿ ಸಿದ್ದವಾಗಿ ನಿಂತ ಮಹಾರಥದಲ್ಲಿ ವಿರಾಜಮಾನವಾಗಿ ಕುಳಿತ ದೇವಿಯು ಮೆರೆವಣಿಗೆ ಮೂಲಕ ಮಧ್ಯಾಹ್ನದ ಹೊತ್ತಿಗೆ ಜಾತ್ರಾ ಗದ್ದುಗೆಗೆ ಆಗಮಿಸಿ ಪ್ರತಿಷ್ಠಾಪನೆ ಗೊಂಡಳು. ಡೊಳ್ಳು ಕುಣಿತ, ಕಂಸಾಳೆ,ಚೆoಡೆ ವಾದನ ಸೇರಿ ಹಲವು ಕಲಾ ತಂಡಗಳು ಮೆರಗು ನೀಡಿದವು. ರಥೋತ್ಸವ ದ ವೇಳೆ ಸುಮಾರು 1 ಲಕ್ಷ ಕ್ಕೂ ಅಧಿಕ ಭಕ್ತಾಧಿಗಳು ಭಾಗಿಯಾಗಿದ್ದರು. ಶಿರಸಿ ಜಾತ್ರೆಯ ಲೈವ್ ವಿಡಿಯೋ ( Sirsi Jatre Live ) ಇಲ್ಲಿದೆ ನೋಡಿ.
ಜಾತ್ರಾ ಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದoತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ರಾಜ್ಯದ ಎರಡನೇ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ರಥೋತ್ಸವದಲ್ಲಿ ಈ ಬಾರಿ ಸುಮಾರು 30 ಲಕ್ಷಕ್ಕೂ ಅಧಿಕ ಭಕ್ತರು ಬರುವ ಸಾಧ್ಯತೆ ಇದ್ದು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ವಿಸ್ಮಯ ನ್ಯೂಸ್,. ಶಿರಸಿ