ಕುಮಟಾದ ಯುವಕನಿಗೆ ಪ್ರತಿಷ್ಠಿತ ಥಿಂಕರ್ಸ್ ಇಂಟರ್ನ್ಯಾಶನಲ್ ಸೊಸೈಟಿಯ ’ಯಂಗ್ ರಿಸರ್ಚರ್ ’ ಪುರಸ್ಕಾರ
ಕೃತಕ ಬುದ್ಧಿಮತ್ತೆ ಕುರಿತು ವಿಶೇಷ ಅಧ್ಯಯನ
ಅಂತರರಾಷ್ಟ್ರೀಯ ಮಟ್ಟದ ಪುರಸ್ಕಾರ
ಕುಮಟಾ: ತಾಲೂಕಿನ ಅಳ್ವೇಕೋಡಿಯ ಡಾ. ಸಚಿನ್ ಭಟ್ಟ ಇವರಿಗೆ ಪ್ರತಿಷ್ಟಿತ ಗ್ರೀನ್ ಥಿಂಕರ್ಸ್ ಇಂಟರ್ನ್ಯಾಶನಲ್ ಸೊಸೈಟಿಯ ’ಯಂಗ್ ರಿಸರ್ಚರ್ 2020’ ಪುರಸ್ಕಾರ ಪ್ರಾಪ್ತವಾಗಿದೆ. ಇವರು ಕುಮಟಾದ ವಿಜಯಾ ಬ್ಯಾಂಕಿನ ನಿವೃತ್ತ ಉದ್ಯೋಗಿ ಸದಾಶಿವ ಭಟ್ಟ ಹಾಗೂ ಶಿಕ್ಷಕಿ ಶೈಲಜಾ ಭಟ್ಟರ ಪುತ್ರ. ’ಡಿಸೈನ್ ಎಂಡ್ ಡೆವೆಲೋಪ್ಮೆಂಟ್ ಆಫ್ ಡೀಪ್ ಲರ್ನಿಂಗ್ ಟೆಕ್ನಿಕ್ಸ್ ಫಾರ್ ದ ಕ್ಯಾರೆಕ್ಟರ್ ರೆಕೊಗ್ನಿಶನ್ ಆಫ್ ಕನ್ನಡ ಎಪಿಗ್ರಾಫ್ಸ್’ ಎಂಬ ಇವರ ಮಹಾಪ್ರಬಂಧಕ್ಕೆ ಬೆಂಗಳೂರಿನ ರೇವಾ ತಾಂತ್ರಿಕ ವಿಶ್ವವಿದ್ಯಾನಿಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕುಮಟಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರಗಿಯ ಮಹಾತ್ಮಾ ಗಾಂಧೀ ಪ್ರೌಢಶಾಲೆ ಹಾಗೂ ಎ.ವಿ.ಬಾಳಿಗಾ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಇವರು ಭಟ್ಕಳದ ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಹಾಗೂ ನಿಟ್ಟೆಯಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿದರು. ಕೃತಕ ಬುದ್ಧಿಮತ್ತೆ, ಇತಿಹಾಸ ಹಾಗೂ ಕನ್ನಡ ಭಾಷಾಶಾಸ್ತ್ರದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ ಇವರ ಅರವತ್ತಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದಲ್ಲದೇ ಅನೇಕ ಅಂತರರಾಷ್ಟ್ರೀಯ ಮಟ್ಟದ ಪುರಸ್ಕಾರಗಳಿಗೆ ಪ್ರಾಪ್ತವಾಗಿವೆ.
ಇವರು ಕಳೆದ ಏಳು ವರ್ಷಗಳಿಂದ ಶಿರಸಿಯ ಸೋಂದಾ ವಾದಿರಾಜ ಮಠದಿಂದ ಉಡುಪಿಯಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಸಚಿನ್ ಭಟ್ಟರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಳ್ವೇಕೋಡಿಯ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ದಿ ಭದ್ರಾ ಸೋಲಾರ್ ವಾಟರ್ ಹೀಟರ್
ವೆಂಕಿನ್ ಸೋಲಾರ್
7 ರಿಂದ 10 ವರ್ಷದ ಗ್ಯಾರಂಟಿ
ಕೈಗೆಟಕುವ ಬೆಲೆಯಲ್ಲಿ ಲಭ್ಯ
ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಾಡೆಕ್ಟ್
ಪರಿಸರ ಸ್ನೇಹಿಯಾಗಿದೆ
ಹಣ ಮತ್ತು ವಿದ್ಯುತ್ ಉಳಿಸಲು ಸಹಕಾರಿ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಸಂಪಕರ್ಿಸಿ: 7848833568