ಕುಮಟಾ: ತಾಲೂಕಿನ ಊರುಕೇರಿಯ ತಲಗೋಡು ಶ್ರೀ ಸ್ವರ್ಣ ಮಹಾಸತಿ ಯಕ್ಷಿ ಚೌಡೇಶ್ವರಿ ದೇವಸ್ಥಾನದ ವಾರ್ಷಿಕ ಪೂಜೆ ಮತ್ತು ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊoಡಿತು. ಮೇ 13ರಂದು ರಾತ್ರಿ ಸುದರ್ಶನ ಹೋಮ, ವಾಸ್ತುಬಲಿ, 14ರಂದು ಶ್ರೀ ದೇವರ ಮೂಲಮಂತ್ರ ಹೋಮ, ಕಲಾವೃದ್ಧಿ ಹೋಮ, ಗ್ರಾಮದೇವತಾ ಬಲಿ, ಪಲ್ಲಕ್ಕಿ ಉತ್ಸವ ಧಾರ್ಮಿಕ ವಿಧಿವಿಧಾನದಂತೆ ನೆರವೇತು. ಮೇ 15ರಂದು ಶಾಂತಿಹೋಮ ಸಹಿತವಾಗಿ ಹೋಕಳಿ ಬಲಿ, ಹೋಕಳಿ ಮಹಾಪೂಜೆ, ಮಹಾಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ದೇವರ ಕಲಶೋತ್ಸವ ಕೆಂಡಸೇವೆ ಜರುಗಿದವು.
ಶ್ರೀ ದೇವರ ಕಲಶವು ಮೂಲಸ್ಥಾನದಿಂದ ಹೊರಟು ಪರಿವಾರಗಣಗಳ ಸ್ಥಾನದಲ್ಲಿ ಪೂಜೆಯನ್ನು ಪಡೆದು ಕಟ್ಟಿಗೆದಾರರ ಸಹಿತವಾಗಿ ಗ್ರಾಮ ಪ್ರದಕ್ಷಿಣೆ ಹಾಕಿ ಭಕ್ತರಿಂದ ವಿವಿಧ ಸೇವೆಯನ್ನು ಪಡೆದು ಕೆಂಡಹಾಯುದರ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊoಡಿತು. ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಕೃತಾರ್ತರಾದರು. ನಂತರ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕೆಕಟ್ಟು ಶಿರಿಯಾರ ಇವರಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಗೊಂಡಿತು.
ವಿಸ್ಮಯ ನ್ಯೂಸ್, ಕುಮಟಾ