ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಮೊದಲನೆ ಹಂತ; ರಸ್ತೆ ಬದಿಯ ಗೂಡಂಗಡಿಗಳ ತೆರವಿಗೆ ಮುಂದಾದ ಅಧಿಕಾರಿಗಳು

ಕುಮಟಾ: ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಇದೀಗ ಕುಮಟಾ ಪಟ್ಣಣ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಮೊದಲನೆ ಹಂತವಾಗಿ ಚರಂಡಿ ನಿರ್ಮಾಣ ಕಾರ್ಯ ನಡೆಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರಸ್ತೆ ಯಂಚಿನ ಗೂಡಂಗಡಿಗಳ ತೆರವಿಗೆ ಜಿಲ್ಲಾಧಿಕಾರಿಗಳು ಹಾಗೂ ಕುಮಟಾ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದರೆ ಮುಂಚಿತವಾಗಿ ವಿಷಯ ತಿಳಿಸದೇ ಏಕಾ ಏಕಿ ಅಂಡಿಗಳನ್ನು ತೆರವುಗೊಳಿಸಲು ಕುಮಟಾ ಪುರಸಭೆ ಅಧಿಕಾರಿಗಳು ಸೇರಿದಂತೆ ಸಂoಧಪಟ್ಟ ಅಧಿಕಾರಿಗಳು ಮುಂದಾದಾಗ ಅಂಗಡಿಕಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಗೂಡಂಗಡಿಕಾರರು ಅತಿಕ್ರಮಣ ಮಾಡಿ ಅಂಗಡಿ ನಿರ್ಮಿಸಿರುವುದರಿಂದ ಇಂದಲ್ಲ ನಾಳೆ ಅಂಗಡಿಗಳನ್ನು ತೆರವುಗೊಳಿಸಲೇ ಬೇಕಿದೆ ಎಂದು ಸಂಬoದಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಬೇರೆಲ್ಲಾ ತಾಲೂಕುಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಪೂರ್ಣಗೊಂಡಿದೆ. ಆದರೆ ಕುಮಟಾದಲ್ಲಿ ಮಾತ್ರ ಈ ಕಾರ್ಯ ಆಗಿಲ್ಲ. ರಸ್ತೆ ಅಗಲೀಕರಣಕ್ಕೂ ಮೊದಲು ಚರಂಡಿ ನಿರ್ಮಾಣ ಕಾರ್ಯ ಅಗತ್ಯ ಇರುವುದರಿಂದ ಇದೀಗ ಎನ್.ಹೆಚ್.ಐ ಪುರಸಭೆಗೆ ನಿರ್ದೇಶನ ನೀಡಿ, ಅಂಗಡಿ ತೆರವುಗೊಳಿಸಲು ಸೂಚಿಸಿದೆ. ಆದರೆ ಏಕಾಏಕಿ ಅಂಗಡಿ ತೆರವುಗೊಳಿಸುವದಕ್ಕೆ ಅಂಗಡಿಕಾರರಿoದ ವಿರೋದ ವ್ಯಕ್ತವಾಗಿದೆ.

ಜೀವನೋಪಾಯಕ್ಕಾಗಿ ರಸ್ತೆಯಂಚಿನಲ್ಲಿ ಅಂಗಡಿ ನಿರ್ಮಿಸಿ ಜೀವನ ಸಾಗಿಸುತ್ತಿದ್ದೆವೆ. ಅಭಿವೃದ್ಧಿಗೆ ನಮ್ಮ ಸಹಕಾರವಿದೆ. ಆದರೆ ಏಕಾ ಏಕಿ ಅಂಗಡಿ ತೆರವುಗೊಳಿಸುವುದು ಎಂದು ಕಷ್ಟಸಾಧ್ಯ. ಪಟ್ಟಣದ ಒಂದು ತುದಿಯಿಂದ ಹೆದ್ದಾರಿಯಂಚಿನ ಅತಿಕ್ರಮಣ ಕಾರ್ಯಾಚರಣೆ ನಡೆಸಿ ಅಲ್ಲಿಂದ ಕಾಮಗಾರಿ ಆರಂಭಿಸಿ ಆ ಮೂಲಕ ಅಂಗಡಿಕಾರರಿಗೆ ಕಾಲವಕಾಶ ನೀಡಬೇಕು ಎಂಬುದು ಅಂಗಡಿಕಾರರ ಆಗ್ರಹವಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಸಂಬoಧಪಟ್ಟ ಅಧಿಕಾರಿಗಳ ಜೊತೆ ಗೂಡಂಗಡಿಕಾರರ ಮತ್ತು ಪ್ರಮುಖರ ಸಭೆ ಏರ್ಪಡಿಸಿ ಎಂದು ಆಗ್ರಹಿಸಿದ್ದಾರೆ.

ಗೂಡಂಗಡಿಕಾರರು ಅತಿಕ್ರಮಣ ಮಾಡಿ ರಸ್ತೆಯಂಚಿನಲ್ಲಿ ಅಂಗಡಿ ನಿರ್ಮಿಸಿದ್ದಾರೆ. ಇವರಿಗೆ ಮುಂಚಿತವಾಗಿ ತಿಳಿಸುವ ಪ್ರಶ್ನೇಯೆ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆದೇಶ ಬಂದಿದ್ದು, ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಅಂಗಡಿಕಾರರು ಸಹಕಾರ ನೀಡಿ ಅಗಂಡಿ ತೆರವುಗೊಳಿಸಲೇಬೇಕು. ಈ ಬಗ್ಗೆ ಹೈಕೋರ್ಟ್ ಆದೇಶ ಸಹ ಇದ್ದು, ರಸ್ತೆಯಂಚಿನ 40 ಮೀ ಅಂತರದಲ್ಲಿ ಯಾವುದೇ ಅಂಗಡಿ ಇರುವಂತಿಲ್ಲ. ಕುಮಟಾ ಪಟ್ಟಣದಲ್ಲಿ ಮೊದಲಿಗೆ ಚರಂಡಿ ಕಾಮಗಾರಿ ನಡೆಸಿ, ಬಳಿಕ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವೇ ಪ್ರಾರಂಭಿಸುತ್ತೆವೆ ಎಂದು ಎನ್.ಎಚ್.ಐ ಅಧಿಕಾರಿಗಳು ನಮ್ಮ ವಿಸ್ಮಯ ಟಿ.ವಿ ಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ಬಗ್ಗೆ ಕುಮಟಾ ತಹಶೀಲ್ಧಾರರು ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಚರ್ಚೆ ನಡೆಸಿ ಪುರಸಭೆ ಅಧಿಕಾರಿಗಳಿಗೆ ಅಂಗಡಿ ತೆರವುಗೊಳಿಸಲು ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಗೂಡಂಗಡಿಕಾರರು ಸಹಕಾರ ನೀಡಬೇಕು ಎಂದಿದ್ದಾರೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

Exit mobile version