ಕಳೆದ 10 ವರ್ಷದಿಂದ ಮರೀಚಿಕೆಯಾಗಿದೆ ಅಭಿವೃದ್ಧಿ ಕಾರ್ಯ: ಪಟ್ಟಣ ಪಂಚಾಯತ್ ಕಛೇರಿಗೆ ತೆರಳಿ ಆಕ್ರೋಶ ಹೊರಹಾಕಿದ ಗ್ರಾಮಸ್ಥರು

ಭಟ್ಕಳ: ಹುರುಳಿಸಾಲ್, ಮೇಲಿನಹಿತ್ಲು, ಕಂಡೆಕೊಡ್ಲು ಸೇರಿದಂತೆ ಕಡವಿನಕಟ್ಟೆ ವಾರ್ಡ್ ಜಾಲಿ ಪಟ್ಟಣ ಪಂಚಾಯತ್ ನ ನಿರ್ಲಕ್ಷಕ್ಕೆ ಒಳಗಾಗಿದ್ದು, ಅಧಿಕಾರಿಗಳು ಕಳೆದ ಹತ್ತು ವರ್ಷದಿಂದ ಈ ಭಾಗದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯವನ್ನು ಕೈಕೊಳ್ಳುತ್ತಿಲ್ಲ ಎಂದು ಇಲ್ಲಿಯ ಗ್ರಾಮಸ್ಥರು ಜಾಲಿ ಪಟ್ಟಣ ಪಂಚಾಯತ್ ಕಛೇರಿ ಹತ್ತಿರ ಜಮಾವಣೆಗೊಂಡು ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯತ್ ರಚನೆಯಾಗಿ ಹತ್ತು ವರ್ಷಗಳೆ ಕಳೆದಿದೆ. ಆದರು ಅಭಿವೃದ್ದಿ ಮಾತ್ರ ಶೂನ್ಯ ಈ ಹಿಂದೆ ಗ್ರಾಮ ಪಂಚಾಯತ್ ಇದ್ದ ಸಂದರ್ಭಗಳಲ್ಲಿ ಎಲ್ಲಾ ಕೆಲಸವು ಸಲೀಸಾಗಿ ಆಗುತ್ತಿತ್ತು. ಇದೀಗ ಖಾಸಗಿಯವರು ತಮ್ಮ ಜಮೀನುಗಳಿಗೆ ಸಾಮಾಗ್ರಿಗಳನ್ನು ಒಯ್ಯಲು ನೀರು ಹರಿಯುವ ಹಳ್ಳಕ್ಕೆ ಮಣ್ಣು ತುಂಬಿದ್ದಾರೆ. ಇದರಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಯಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ತುಂಬುತ್ತಿದೆ. ಈ ವಾರ್ಡನಲ್ಲಿರುವ ಗಟಾರಗಲಲ್ಲಿ ಹೂಳು ತುಂಬಿಕೊAಡು ಮಳೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದಂತಾಗಿದೆ.

ಅಲ್ಲದೆ ಕಾಡು ಮರಗಳು ಒಣಗಿಕೊಂಡು 11 ಕೆ.ವಿ ಲೈನ್ ಗೆ ತಾಗಿಕೊಂಡಿದ್ದು ಗಾಳಿ ಮಳೆಗೆ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಇಷ್ಟೇಲ್ಲಾ ಸಮಸ್ಯೆಗಳಿದ್ದರೂ ಈ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಪದೇ ಪದೇ ಅರ್ಜಿಯನ್ನು ನೀಡಿದರೂ ಅಧಿಕಾರಿಗಳು ಗಾಡ ನಿದ್ರೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಹರಿಹಾಯ್ದರು. ಈ ಕುರಿತಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಳು ಹಾಗೂ ಭಟ್ಕಳ ತಹಶಿಲ್ಧಾರಿಗೆ ಮನವಿಪತ್ರ ನೀಡಲಾಗಿದ್ದು, ತಹಶಿಲ್ದಾರ ನಾಗರಾಜ ನಾಯ್ಕಡ ಗ್ರಾಮಸ್ಥರ ಎದುರೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಪೋನ್ ಕರೆ ಮೂಲಕ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಆದೇಶಿಸಿದರು.

ಒಟ್ಟಿನಲ್ಲಿ ಸಚಿವರು ಮಳೆಗಾಲದ ಪೂರ್ವತಯಾರಿಯ ಕುರಿತಾಗಿ ಅಧಿಕಾರಿಗಳ ಸಭೆ ಕರೆದು ಅಧಿಕಾರಗಳಿಗೆ ಏಷ್ಟೇ ಬಿಸಿಮುಟ್ಟಿಸಿದರು ಉನ್ನತ ಸ್ಥಾನವನ್ನು ಅಲಂಕರಿಸಿರುವ ಅಧಿಕಾರಿಗಳದ್ದು ಮಾತ್ರ ಕಾರ್ಯಪ್ರವೃತ್ತರಾಗುವ ನಿಟ್ಟಿನಲ್ಲಿ ದಿವ್ಯ ನಿರ್ಲಕ್ಷ್ಯ.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ

Exit mobile version