ಬೆಳ್ಳಂಬೆಳಿಗ್ಗೆ ನಿತ್ಯ ಹಾಲಿನ ಪ್ಯಾಕೆಟ್ ಕಳ್ಳತನ: ಸಿಟ್ಟುಬಂದು ಸಿಸಿಟಿವಿಯನ್ನೇ ಒಡೆದಿದ್ದು ಯಾಕೆ ನೋಡಿ?

ಭಟ್ಕಳ: ವ್ಯಕ್ತಿಯೊಬ್ಬ ನಿತ್ಯ ಹಾಲಿನ ಪ್ಯಾಕೆಟ್ ಕದಿಯುತ್ತಿದ್ದು, ಇದು ಹಾಲು ಪೂರೈಸುವ ಕಂಪನಿಗೆ ದೊಡ್ಡ ತಲೆನೋವಾಗಿದೆ. ಸಾವಿರಾರು ಲೀಟರ್ ಹಾಲು ತಾಲೂಕಿಗೆ ಬರುತ್ತಿದ್ದು, ಅದರಲ್ಲಿ ಅರ್ಧಕ್ಕೂ ಅಧಿಕ ಪಾಲು ಕಳ್ಳನಿಗೆ ಸೇರುತ್ತಿದೆ.

ಭಟ್ಕಳದಲ್ಲಿ ರಂಗಿನಕಟ್ಟೆಯ ಬಳಿಯಲ್ಲಿ ಇಳಿಸುವ ಹಾಲಿನ ಕೊಟ್ಟೆಯನ್ನು ಈತ ನಿರಂತರವಾಗಿ ಅಪಹರಿಸುತ್ತಿದ್ದು, ಆತನ ಪತ್ತೆಗೆ ಕಂಪನಿಯವರು ಸಿಸಿ ಕ್ಯಾಮರಾ ಇರುವ ಕಡೆ ಹಾಲಿನ ಕೊಟ್ಟೆ ಇರಿಸಿದ್ದರು. ಕ್ಯಾಮರಾ ಇರುವುದನ್ನು ನೋಡಿಯೂ ಆತ ಕದಿಯುವ ಸಾಹಸ ಮಾಡಿದ್ದು, ಆ ದೃಶ್ಯಾವಳಿಗಳು ಸೆರೆಯಾಗಿದೆ. ಬೆಳಗ್ಗೆ 4 ಗಂಟೆಗೆ ಆಗಮಿಸಿದ ಕಳ್ಳ ತನ್ನ ಕೈ ಚಳಕ ಪ್ರದರ್ಶಿಸಿದ್ದಾನೆ. ನಂತರ ಕ್ಯಾಮರಾ ನೋಡಿ, ಸಿಟ್ಟಾಗಿ ಅಲ್ಲಿದ್ದ ಸಿಸಿ ಕ್ಯಾಮರಾವನ್ನು ಒಡೆದು ಪರಾರಿಯಾಗಿದ್ದಾನೆ.

ವಿಸ್ಮಯ ನ್ಯೂಸ್, ಭಟ್ಕಳ

Exit mobile version