ಬಡ ಮಹಿಳೆಯರಿಗೆ ಎಲೆಕ್ಟ್ರಿಕಲ್ ಪ್ರಯಾಣಿಕ ಆಟೋರಿಕ್ಷಾ: ಇಂದೇ ಅರ್ಜಿ ಸಲ್ಲಿಸಿ

ಹೊನ್ನಾವರ: ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಕ್ಲಬ್ ವತಿಯಿಂದ ಹೊನ್ನಾವರ ತಾಲೂಕಿನ ಭಾಗದಲ್ಲಿ ವಾಸ್ತವ್ಯವಿರುವ ಮಹಿಳೆಯರಿಗೆ ಎಲೆಕ್ಟ್ರಿಕಲ್ ಪ್ರಯಾಣಿಕ ಆಟೋರಿಕ್ಷಾವನ್ನು ನೀಡಲು ಯೋಜಿಸಲಾಗಿದೆ. ಬಡ ಕುಟುಂಬದ ಹಿನ್ನೆಲೆಯ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಕನಿಷ್ಠ 7ನೇ ತರಗತಿ ಪಾಸಾದ ಮತ್ತು 18 ವರ್ಷಕ್ಕಿoತ ಮೇಲ್ಪಟ್ಟವರಾಗಿರಬೇಕು ಎಂದು ರೋಟರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ನಮೂನೆಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.

ನನ್ನ ಮಗನನ್ನು ಹುಡುಕಿಕೊಡಿ: ತಾಯಿಯ ದೂರಿನಲ್ಲಿ ಏನಿದೆ?

ಕನಿಷ್ಟ 7ನೇ ತರಗತಿ ಪಾಸಾದ 18 ವರ್ಷ ಮೇಲ್ಪಟ್ಟ ಮಹಿಳೆಯಾಗಿರಬೇಕು. ಬಡ ಕುಟುಂಬದ ಹಿನ್ನೆಲೆಯುಳ್ಳ ಹಾಗೂ ಕುಟುಂಬ ನಿರ್ವಹಣೆಯ ಜವಾಬ್ದಾರಿಯುಳ್ಳವರಾಗಿರಬೇಕು. ರಿಕ್ಷಾ ಚಾಲನೆ ಮಾಡಬಹುದಾದ ಆತ್ಮವಿಶ್ವಾಸ ಇರುವ ಸಶಕ್ತ ಮಹಿಳೆಯಾಗಿರಬೇಕು. ಉಚಿತವಾಗಿ ಚಾಲನಾ ತರಬೇತಿಯನ್ನು ನೀಡುವುದರೊಂದಿಗೆ ಪರವಾನಿಗೆಯನ್ನು ತೆಗೆದುಕೊಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-08-2024. ಅರ್ಜಿ ನಮೂನೆಗಳಗಾಗಿ ಈ ಕೆಳಗಿನ ರೋಟಲಿ ಸದಸ್ಯರನ್ನು ಸಂಪರ್ಕಿಸಬಹುದು : ಸೂರ್ಯಕಾಂತ ಸಾರಂಗ, ಮೊ: 9448778050, ಜಿ. ಪಿ. ಹೆಗಡೆ, ಮೊ : 9448738376 .

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version